ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪ್ರಕರಣಗಳ ಏರಿಕೆ: ತೆರೆ ಮೇಲೆ ಸದ್ಯಕ್ಕಿಲ್ಲ ಬಿಗ್‌ ಬಜೆಟ್‌ ಸಿನಿಮಾ

Last Updated 8 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಸರ್ಕಾರವು ಶೇ 50 ನಿರ್ಬಂಧಿಸಿದ ಕಾರಣ, ಬಿಡುಗಡೆಗೆ ಸಜ್ಜಾಗಿದ್ದ ಕೆಲ ಬಿಗ್‌ಬಜೆಟ್‌ ಸಿನಿಮಾಗಳು ಮುಂದಕ್ಕೆ ಹೋಗಿವೆ.

ಚಿತ್ರಪ್ರದರ್ಶನದ ಮೇಲಿದ್ದ ನಿರ್ಬಂಧ ಸಡಿಲಿಕೆಯಾದ ಬಳಿಕ, ಫೆ. 5ಕ್ಕೆ ಇನ್‌ಸ್ಪೆಕ್ಟರ್‌ ವಿಕ್ರಂ, ಫೆ. 19ರಂದು ಧ್ರುವ ಸರ್ಜಾ ನಟನೆಯ ‘ಪೊಗರು’, ಮಾರ್ಚ್‌ 11ರಂದು ದರ್ಶನ್‌ ಅಭಿನಯದ ‘ರಾಬರ್ಟ್‌’ ಹಾಗೂ ಏ.1ರಂದು ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’, ಹೀಗೆ ಎರಡು ವಾರಕ್ಕೊಮ್ಮೆ ಬಿಗ್‌ ಬಜೆಟ್‌ ಸಿನಿಮಾಗಳು ತೆರೆಕಂಡವು. ಇದರ ಬೆನ್ನಲ್ಲೇ ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಆದೇಶ ಹೊರಬಿದ್ದಿತು. ಹೀಗಾಗಿ, ಇದೇ ತಿಂಗಳು ಬಿಡುಗಡೆಗೆ ಸಜ್ಜಾಗಿದ್ದ ದುನಿಯಾ ವಿಜಯ್‌ ನಟಿಸಿ ನಿರ್ದೇಶಿಸಿರುವ ಮೊದಲ ಸಿನಿಮಾ ‘ಸಲಗ’ ಹಾಗೂ ಕಿಚ್ಚ ಸುದೀಪ್‌ ನಟನೆಯ ‘ಕೋಟಿಗೊಬ್ಬ–3’ ಚಿತ್ರ ಇದೀಗ ಮುಂದಕ್ಕೆ ಹೋಗಿವೆ.

‘ಸಿನಿಮಾ ಪ್ರದರ್ಶನದ ಮೇಲಿನ ನಿರ್ಬಂಧ ಸಡಿಲವಾದ ಬಳಿಕ ನಿರ್ಮಾಪಕರು ಸೇರಿಕೊಂಡು ಯಾರಿಗೂ ಸಮಸ್ಯೆಯಾಗದಂತೆ ಚಿತ್ರಗಳ ಬಿಡುಗಡೆಗೆ ನಿರ್ಧರಿಸಿದ್ದೆವು. ಅದರಂತೆ ಸಿನಿಮಾಗಳು ಬಿಡುಗಡೆಯಾಗಿವೆ. ಇದೀಗ ಮತ್ತೆ ಪ್ರೇಕ್ಷಕರ ಸಂಖ್ಯೆಯ ನಿರ್ಬಂಧ ಹೇರಿರುವ ಕಾರಣ ಕೋಟಿಗೊಬ್ಬ–3 ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ. ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ ಬಳಿಕವಷ್ಟೇ ಬಿಡುಗಡೆ ಮಾಡುತ್ತೇವೆ’ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದರು.

ದುನಿಯಾ ವಿಜಯ್‌
ದುನಿಯಾ ವಿಜಯ್‌

ಪ್ರೇಕ್ಷಕರ ಸಂಖ್ಯೆ ನಿರ್ಬಂಧ ಸಡಿಲಿಕೆಯಾದಲ್ಲಿ ಸಲಗ ಹಾಗೂ ಕೋಟಿಗೊಬ್ಬ–3 ಚಿತ್ರಗಳು ಮೇ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಹೀಗಾದಲ್ಲಿ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಶಿವರಾಜ್‌ ಕುಮಾರ್‌ ನಟನೆಯ ‘ಭಜರಂಗಿ–2’ ಚಿತ್ರವೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಸೂರಜ್‌ ಗೌಡ ಹಾಗೂ ಧನ್ಯಾ ರಾಮ್‌ಕುಮಾರ್‌ ನಟನೆಯ ‘ನಿನ್ನ ಸನಿಹಕೆ’ ಏ.16ಕ್ಕೆ ಬಿಡುಗಡೆಯಾಗಬೇಕಿತ್ತು. ಈ ಚಿತ್ರದ ಬಿಡುಗಡೆಯೂ ಇದೀಗ ಮುಂದಕ್ಕೆ ಹೋಗಿದೆ. ‘ರಾಜ್ಯದಲ್ಲಿ ಮತ್ತೆ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ತೋರಿಸುತ್ತಿದೆ. ಆ ಕಾರಣದಿಂದ ಚಿತ್ರವನ್ನು ಈ‌ ವೈರಸ್‌ ‌ಆರ್ಭಟ‌ ಕಡಿಮೆ‌‌ಯಾಗುವವರೆಗೂ ಬಿಡುಗಡೆ ಮಾಡುವುದಿಲ್ಲ’ ಎಂದು ‘ಮೋಕ್ಷ’ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮರ್ಥ್ ನಾಯಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT