ಚಂದನವನದಲ್ಲಿ ಹೀರೊ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೂ ಮುನ್ನ ಡೈರೆಕ್ಟರ್ ಕ್ಯಾಪ್ ತೊಟ್ಟು ಮಿಂಚಿದವರು ನಟ ಉಪೇಂದ್ರ. ಸಾಲು ಸಾಲು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಉಪ್ಪಿ ಇದೀಗ ಸುಮಾರು ಏಳು ವರ್ಷಗಳ ನಂತರ ಮತ್ತೆ ಕ್ಯಾಮೆರಾ ಹಿಂದೆ ನಿಂತಿದ್ದಾರೆ. ಉಪ್ಪಿ ನಿರ್ದೇಶನದ ಹೊಸ ಚಿತ್ರ ‘ಯು ಐ’ ಚಿತ್ರೀಕರಣ ಮಂಗಳವಾರದಿಂದ ಆರಂಭವಾಗಿದೆ.

ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆದಿತ್ತು. ನಟರಾದ ಶಿವರಾಜ್‌ಕುಮಾರ್, ಸುದೀಪ್, ಡಾಲಿ ಧನಂಜಯ, ವಸಿಷ್ಠ ಸಿಂಹ ಹೀಗೆ ಸ್ಯಾಂಡಲ್‌ವುಡ್‌ನ ಪ್ರಮುಖರ ಸಮ್ಮುಖದಲ್ಲೇ ಅದ್ಧೂರಿಯಾಗಿ ಸಿನಿಮಾ ಸೆಟ್ಟೇರಿತ್ತು.

‘ತರ್ಲೆನನ್ಮಗ’ನಿಂದ ಹಿಡಿದು ‘ಶ್’, ‘ಓಂ’, ‘ಆಪರೇಷನ್ ಅಂತ’, ‘ಎ’, ‘ಸ್ವಸ್ತಿಕ್’, ‘ಉಪೇಂದ್ರ’, ‘ಸೂಪರ್’, ‘ಉಪ್ಪಿ–2’ ಹೀಗೆ ಉಪೇಂದ್ರ ಅವರು ಆ್ಯಕ್ಷನ್ ಕಟ್ ಹೇಳಿದ ಸಿನಿಮಾಗಳೆಲ್ಲವೂ ಹಿಟ್ ಆಗಿದ್ದವು. ‘ಯು ಐ’ ಎಂಬ ಮತ್ತೊಂದು ವಿಭಿನ್ನ ಶೀರ್ಷಿಕೆಯನ್ನಿಟ್ಟುಕೊಂಡು ಉಪೇಂದ್ರ ಅವರು ಮತ್ತೆ ಪ್ರೇಕ್ಷಕರ ಎದುರಿಗೆ ಬಂದಿದ್ದಾರೆ.

ಕ್ಯಾಮೆರಾ ಹಿಂದೆ ನಿಂತು ಉಪೇಂದ್ರ ಅವರು ಆ್ಯಕ್ಷನ್ ಅನ್ನುತ್ತಿದ್ದಂತೇ ಹುಮ್ಮಸ್ಸಿನಿಂದ ಕೆಲಸ ಆರಂಭಿಸಿದ್ದೇವೆ ಎಂದಿದೆ ಚಿತ್ರತಂಡ ತಂಡ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಯುವ ತಂತ್ರಜ್ಞರು ಕೆಲಸ ಮಾಡುತ್ತಿರುವುದು ವಿಶೇಷ ಎಂದಿದೆ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.