ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ ‘ಸಂಜು ವೆಡ್ಸ್ ಗೀತಾ-2’ ಜೂ.6ರಂದು ಮರುಬಿಡುಗಡೆಯಾಗುತ್ತಿದೆ. ಅದೇ ದಿನ ಅವರು ಖಳನಾಗಿ ನಟಿಸಿರುವ ‘ಮಾದೇವ’ ಚಿತ್ರ ಕೂಡ ತೆರೆಗೆ ಬರುತ್ತಿದೆ. ಎರಡು ಚಿತ್ರಗಳಲ್ಲಿನ ತಮ್ಮ ಪಾತ್ರ ಹಾಗೂ ಸಿನಿಪಯಣದ ಕುರಿತು ಅವರು ಮಾತನಾಡಿದ್ದಾರೆ...

ಈ ವರ್ಷದ ಪ್ರಾರಂಭದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ‘ಸಂಜು ವೆಡ್ಸ್ ಗೀತಾ-2’ ಚಿತ್ರ ತೆರೆಕಂಡಿತ್ತು. ಆದರೆ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಕಾನೂನು ತೊಡಕಿನಿಂದ ಚಿತ್ರದ ಹಕ್ಕುಗಳ ಮಾರಾಟಕ್ಕೂ ತೊಂದರೆಯಾಗಿತ್ತು. ಹೀಗಾಗಿ ಇದೀಗ ಒಂದಷ್ಟು ಬದಲಾವಣೆಗಳೊಂದಿಗೆ ಚಿತ್ರ ಮತ್ತೆ ತೆರೆಗೆ ಬರುತ್ತಿದೆ.

‘ಹಿಂದೆಯೂ ಕೆಲ ಸಿನಿಮಾಗಳು ಒಮ್ಮೆ ಬಿಡುಗಡೆಗೊಂಡು ಜನರ ಅಭಿಪ್ರಾಯ ಪಡೆದು ಮತ್ತೆ ಮರು ಬಿಡುಗಡೆಗೊಂಡಿದ್ದಿದೆ. 2025ರ ಜನವರಿಯಲ್ಲಿ ಅನಿವಾರ್ಯವಾಗಿ ಚಿತ್ರ ಬಿಡುಗಡೆ ಮಾಡುವಂತೆ ಆಯಿತು. ನಮ್ಮ ಚಿತ್ರದ ಸುಮಾರು 20 ನಿಮಿಷಗಳ ದೃಶ್ಯಗಳು ಕಾನೂನು ಸಮರದಿಂದಾಗಿ ಗ್ರಾಫಿಕ್ಸ್ ಸ್ಟುಡಿಯೋದಲ್ಲಿತ್ತು. ಈಗ ಆ ಫೂಟೇಜ್ ಮರಳಿ ಪಡೆದು ಸಿನಿಮಾವನ್ನು ಒಂದಷ್ಟು ಬದಲಿಸಿದ್ದೇವೆ. ನನ್ನ ಪಾತ್ರದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ರಾಗಿಣಿ, ರಂಗಾಯಣ ರಘು ಮುಂತಾದವರ ಪಾತ್ರಗಳಲ್ಲಿ ಒಂದಷ್ಟು ಬದಲಾವಣೆಯಾಗಿದೆ’ ಎಂದು ಮಾತು ಪ್ರಾರಂಭಿಸಿದರು ಕಿಟ್ಟಿ.

‘ಈ ವಾರ ನನ್ನದೇ ಎರಡು ಸಿನಿಮಾಗಳು ತೆರೆಗೆ ಬರುತ್ತಿವೆ. ಒಂದರಲ್ಲಿ ನಾಯಕ, ಮತ್ತೊಂದರಲ್ಲಿ ಖಳನಾಯಕ. ಬಹುಶಃ ಈ ರೀತಿಯಾಗಿ ಜನರ ಎದುರಿಗೆ ಬಹಳ ಅಪರೂಪ. ವಿನೋದ್ ಪ್ರಭಾಕರ್ ಅವರ ‘ಮಾದೇವ’ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿರುವೆ. ‘ಸಮುದ್ರ’ ನನ್ನ ಪಾತ್ರದ ಹೆಸರು. ತುಂಬ ರಗಡ್ ಪಾತ್ರ. ದೊಡ್ಡ ತಾರಾಬಳಗ ಹೊಂದಿರುವ ಉತ್ತಮ ಚಿತ್ರ’ ಎಂದು ಅವರು ವಿವರಿಸಿದರು.

ಪವಿತ್ರ ಇಂಟರ್ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ‘ಸಂಜು ವೆಡ್ಸ್ ಗೀತಾ–2’ ಚಿತ್ರಕ್ಕೆ ನಾಗಶೇಖರ್ ನಿರ್ದೇಶನವಿದೆ. ಕಿಟ್ಟಿ, ರಮ್ಯಾ ಜೋಡಿಯ ‘ಸಂಜು ವೆಡ್ಸ್ ಗೀತಾ’ ಹಿಟ್ ಆಗಿತ್ತು. ಅದೇ ಶೀರ್ಷಿಕೆಯನ್ನು ಉಳಿಸಿಕೊಂಡು ಬೇರೆಯದೇ ಕಥೆಯೊಂದಿಗೆ ಈ ಚಿತ್ರ ಸಿದ್ಧಗೊಂಡಿದೆ. ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಈ ಚಿತ್ರಕ್ಕಿದೆ. ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಖಳನಟ ಸಂಪತ್ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.

‘ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ‘ರೋಜಿ’. ಅದರಲ್ಲಿಯೂ ಪ್ರಮುಖ ಖಳನಾಯಕನಾಗಿ ನಟಿಸುತ್ತಿರುವೆ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ವಿದೇಶದಲ್ಲಿ 40 ದಿನಗಳ ಚಿತ್ರೀಕರಣ ಬಾಕಿಯಿದೆ. ಆದಿತ್ಯ ಅಭಿನಯದ ‘ಟೆರರ್’ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಇನ್ನೆರಡು ಚಿತ್ರಗಳು ಕಥೆ ಕೇಳಬೇಕಿದೆ. ‘ಸಂಜು ವೆಡ್ಸ್...’ಬಿಡುಗಡೆ ಕೆಲಸದಲ್ಲಿ ಮಗ್ನನಾಗಿದ್ದೆ. ಇದು ಮುಗಿದ ಬಳಿಕ ಆ ಕಥೆಗಳನ್ನು ಕೇಳುವೆ’ ಎಂದು ತಮ್ಮ ಮುಂದಿನ ಯೋಜನೆಗಳನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.