ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಕ್ರಾಂತ್​ ರೋಣ Twitter Review: ಸುದೀಪ್ ನಟನೆಗೆ ಬಹುಪರಾಕ್‌ ಎಂದ ಪ್ರೇಕ್ಷಕರು

ಅಕ್ಷರ ಗಾತ್ರ

ಬೆಂಗಳೂರು: ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಇಂದು (ಗುರುವಾರ) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ರಂಗಿತರಂಗ’ ಖ್ಯಾತಿಯ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ನಿರೂಪ್​ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್‌ ಫರ್ನಾಂಡಿಸ್‌ ಮೊದಲಾದವರು ನಟಿಸಿದ್ದಾರೆ.

‘ವಿಕ್ರಾಂತ್‌ ರೋಣ’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕೋವಿಡ್‌ ಕಾರಣದಿಂದ ಚಿತ್ರ ಬಿಡುಗಡೆಯನ್ನು ಹಲವು ತಿಂಗಳು ಮುಂದೂಡಲಾಗಿತ್ತು.

ಈ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿರುವ ಅಭಿಮಾನಿಗಳು ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿ ಮೂಡಿಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ‘ವಿಕ್ರಾಂತ್‌ ರೋಣ’ ಉತ್ತಮ ಆಕ್ಷನ್, ಹಾರರ್ ಥ್ರಿಲ್ಲರ್ ಸಿನಿಮಾ ಎಂದು ಹೇಳಿಕೊಂಡಿದ್ದಾರೆ.

ಉತ್ತಮ ತಾಂತ್ರಿಕ ಕೆಲಸಗಳೊಂದಿಗೆ ಆಸಕ್ತಿದಾಯಕ ಕಥೆಯನ್ನು ಆಕರ್ಷಕವಾಗಿ ಹೇಳಲಾಗಿದೆ. ಸುದೀಪ್ ಅದ್ಭುತವಾಗಿ ನಟಿಸಿದ್ದಾರೆ. ಕೆಲವು ದೃಶ್ಯಗಳನ್ನು ಕತ್ತರಿಸಬಹುದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನೋಡಿದ ಉತ್ತಮ ಸಿನಿಮಾಗಳಲ್ಲಿ ಒಂದಾಗಿದೆ ಎಂದು ವೆಂಕಿ ಎಂಬುವರು ಟ್ವೀಟ್ ಮಾಡಿದ್ದಾರೆ.

ಏನ್ ಪ್ರೊಡಕ್ಷನ್ ಡಿಸೈನ್ ಗುರು!! ಇದು ಹಾಲಿವುಡ್ ಚಿತ್ರಕ್ಕಿಂತ ಕಡಿಮೆಯೇನಲ್ಲ. ಸುದೀಪ್ ಅದ್ಭುತವಾಗಿ ನಟಿಸಿದ್ದಾರೆ. ಮೊದಲಾರ್ಧ ಅದ್ಭುತವಾಗಿದೆ ಎಂದು ಅರುಣ್ ಎಂಬುವರು ಟ್ವೀಟ್ ಮಾಡಿದ್ದಾರೆ.

‘ವಿಕ್ರಾಂತ್‌ ರೋಣ’ ಭಾರತದ ಅತ್ಯುತ್ತಮ 3D ಚಲನಚಿತ್ರಗಳಲ್ಲಿ ಒಂದಾಗಿದೆ. ಸಸ್ಪೆನ್ಸ್‌ನೊಂದಿಗೆ ಬೆಸ್ಟ್ ಥ್ರಿಲ್ ಸಿಗುತ್ತದೆ. ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ತಲುಪಿದೆ ಎಂದು ರಾಕೇಶ್ ಎಂಬುವರು ಟ್ವೀಟ್ ಮಾಡಿದ್ದಾರೆ.

‘ವಿಕ್ರಾಂತ್‌ ರೋಣ’ ಚಿತ್ರಕ್ಕೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT