ಸಂಜನಾ–ನಾಗಭೂಷಣ್‌ ‘ಹನಿಮೂನ್‌’

ಬುಧವಾರ, ಏಪ್ರಿಲ್ 24, 2019
25 °C

ಸಂಜನಾ–ನಾಗಭೂಷಣ್‌ ‘ಹನಿಮೂನ್‌’

Published:
Updated:
Prajavani

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಹಾಸ್ಯ ಚಿತ್ರದ ಮೂಲಕ ಚಂದನವನದ ಗಮನ ಸೆಳೆದಿದ್ದ ನಟಿ ಸಂಜನಾ ಆನಂದ್ ಮತ್ತು ಯೂ ಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೊಗಳ ಸರದಾರ ನಾಗಭೂಷಣ್‌ ಎನ್.ಎಸ್. ‘ಹನಿಮೂನ್‌’ ಹೊರಟಿದ್ದಾರೆ.

ಮದುವೆಯಾಗಿದ್ದಾರೆ ಅದಕ್ಕೇ ಹನಿಮೂನ್‌ ಹೊರಟಿರಬೇಕು ಎಂದುಕೊಂಡಿರಾ?

‘ಹನಿಮೂನ್‌’, ಈ ಜೋಡಿ ನಟಿಸಲಿರುವ ವೆಬ್‌ ಸರಣಿಯ ಶೀರ್ಷಿಕೆ. ವಿಕ್ರಮ್‌ ಯೋಗಾನಂದ ಇದರ ನಿರ್ದೇಶಕ. ‘ಡಾ ಪಾಲ್‌’ ಎಂಬ ವೆಬ್‌ ಸರಣಿ ಹಾಗೂ ‘ಹೀಗೊಂದು ದಿನ’ ಸಿನಿಮಾ ಮಾಡಿದವರು ವಿಕ್ರಮ್‌.

ಕೇವಲ ಏಳು ಸಂಚಿಕೆಗಳ ಸರಣಿ ಇದಾಗಿರುತ್ತದೆ. ನವದಂಪತಿಯ ಮಧುಚಂದ್ರದ ಸುತ್ತಮುತ್ತ ಹೆಣೆದಿರುವ ಕತೆಯನ್ನು ಒಳಗೊಂಡಿದೆ. ಚಿತ್ರಕತೆ ಮತ್ತು ಸಂಭಾಷಣೆ ಬರೆದಿರುವ ನಾಗಭೂಷಣ್‌ ಮುಖ್ಯ ಭೂಮಿಕೆಯಲ್ಲಿಯೂ ನಟಿಸಲಿದ್ದಾರೆ. ಸಂಜನಾ ಇದೇ ಮೊದಲ ಬಾರಿಗೆ ಡಿಜಿಟಲ್‌ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. 

ವಾಸುಕಿ ವೈಭವ್‌ ಸಂಗೀತ ಸಂಯೋಜಿಸಲಿದ್ದು, ರಾಹುಲ್‌ ರಾಯ್‌ ಅವರ ಸಿನೆಮಾಟೊಗ್ರಫಿಯಲ್ಲಿ ಈ ಸರಣಿ ಮೂಡಿಬರಲಿದೆ. ಬೆಂಗಳೂರು ಸೇರಿದಂತೆ ವಿವಿಧ ಲೊಕೇಷನ್‌ಗಳಲ್ಲಿ ‘ಹನಿಮೂನ್‌’ ಚಿತ್ರೀಕರಣಗೊಳ್ಳಲಿದೆಯಂತೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !