ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಕುಂತಲಾ ದೇವಿ’ ಮಗಳಾಗಿ ಸಾನ್ಯಾ ಮಲ್ಹೋತ್ರಾ

Last Updated 24 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ನಟಿ ಸಾನ್ಯಾ ಮಲ್ಹೋತ್ರಾ ಅವರು ವಿದ್ಯಾ ಬಾಲನ್‌ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ಶಕುಂತಲಾ ದೇವಿ’ ಚಿತ್ರದಲ್ಲಿ ಶಕುಂತಳಾ ದೇವಿ ಮಗಳು ಅನುಪಮಾ ಬ್ಯಾನರ್ಜಿಯಾಗಿ ನಟಿಸುತ್ತಿದ್ದಾರೆ.

ವಿಶ್ವ ಮಗಳ ದಿನದಂದು ಚಿತ್ರದ ನಿರ್ದೇಶಕರು ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ವಿದ್ಯಾಬಾಲನ್‌ ಅವರ ಜೊತೆ ಸಾನ್ಯಾ ನಟಿಸಲಿದ್ದು,ಅವರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಸಾನ್ಯಾ ತುಂಬ ಉತ್ಸುಕರಾಗಿದ್ದಾರೆ. ‘ಶಕುಂತಲಾ ದೇವಿ ಮಗಳಾಗಿ ವಿದ್ಯಾ ಬಾಲನ್‌ ಅವರ ಜೊತೆ ನಟಿಸುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಮಹಾನ್‌ ಗಣಿತಜ್ಞೆ, ಮಾನವ ಕಂಪ್ಯೂಟರ್‌ ಶಕುಂತಲಾ ಅವರ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಹಾಗೂ ಅವರ ಮಗಳ ಸಂಬಂಧವನ್ನು ತೆರೆ ಮೇಲೆ ತರುತ್ತಿರುವುದು ಹಾಗೂ ಅದರಲ್ಲಿ ನಾನು ಭಾಗವಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎಂದು ಸಾನ್ಯಾ ಹೇಳಿಕೊಂಡಿದ್ದಾರೆ.

‘ಅನುಪಮಾ ಅವರ ಪಾತ್ರ ನಿರ್ವಹಿಸುವುದಕ್ಕೆ ಸಾನ್ಯಾ ಅವರಿಗಿಂತ ಮತ್ತೊಬ್ಬ ನಟಿ ಬೇರೆ ಯಾರೂ ಇಲ್ಲ. ಸಿನಿಮಾದಲ್ಲಿ ವಿದ್ಯಾ ಬಾಲನ್‌ ಹಾಗೂ ಸಾನ್ಯಾ ನಟನೆಯನ್ನು ಪ್ರೇಕ್ಷಕರು ಇಷ್ಟಪಡಲಿದ್ದಾರೆ’ ಎಂದು ನಿರ್ದೇಶಕಿ ಅನು ಮೆನನ್‌ ತಿಳಿಸಿದ್ದಾರೆ.

ಇತ್ತೀಚೆಗೆ ಈ ಚಿತ್ರತಂಡವು ಶಕುಂತಲಾ ದೇವಿ ಫಸ್ಟ್‌ಲುಕ್‌ ಅನ್ನು ಬಿಡುಗಡೆ ಮಾಡಿತ್ತು. ಸದ್ಯ ವಿದ್ಯಾಬಾಲನ್‌ ಯುರೋಪ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಾನ್ಯಾ ತಮ್ಮ ಪಾತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಸಾನ್ಯಾ ಅಕ್ಟೋಬರ್‌ ತಿಂಗಳಿನಲ್ಲಿ ಯುರೋಪ್‌ಗೆ ತೆರಳಿ ಅಲ್ಲಿ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಚಿತ್ರವು 2020ರಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT