ಶುಕ್ರವಾರ, ಜನವರಿ 21, 2022
29 °C

ಫೋಟೊಗ್ರಾಫರ್‌ನನ್ನು ತಳ್ಳಿದ ಭದ್ರತಾ ಸಿಬ್ಬಂದಿ: ಸಾರಿ ಕೇಳಿದ ಸಾರಾ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Sara Ali Khan Instagram Post

ಬೆಂಗಳೂರು: ಸೆಲೆಬ್ರಿಟಿಗಳೆಂದರೆ ಸಾಮಾನ್ಯವಾಗಿ ಅವರ ಸುತ್ತಮುತ್ತ ಭದ್ರತಾ ಸಿಬ್ಬಂದಿ ಇರುತ್ತಾರೆ. ಜತೆಗೆ ಫೋಟೊ ತೆಗೆಯಲು, ಸೆಲ್ಫಿಗಾಗಿ ಜನರು ಅವರನ್ನು ಮುತ್ತಿಕೊಳ್ಳುವುದು ಸಾಮಾನ್ಯ.

ಇಂತಹುದೇ ಒಂದು ಸಂದರ್ಭ ನಟಿ ಸಾರಾ ಅಲಿ ಖಾನ್ ಅವರಿಗೂ ಎದುರಾಗಿತ್ತು.

ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ನಡೆದ ಸಾರಾ ಅವರ ಅತ್ರಂಗಿ ರೇ ಸಿನಿಮಾದ ಪ್ರಚಾರ ಕಾರ್ಯದಿಂದ ವಾಪಸ್ ಆಗುವಾಗ, ಫೋಟೊಗ್ರಾಫರ್ ಒಬ್ಬರು ಸಾರಾ ಫೋಟೊ ತೆಗೆಯಲು ಯತ್ನಿಸಿದ್ದಾರೆ. ಆದರೆ ಅದಕ್ಕೆ ಅವಕಾಶ ಕೊಡದ ಭದ್ರತಾ ಸಿಬ್ಬಂದಿ, ಆ ವ್ಯಕ್ತಿಯನ್ನು ತಳ್ಳಿದ್ದಾರೆ.!

ಇದನ್ನು ಗಮನಿಸಿದ ಸಾರಾ, ಕೂಡಲೇ ಆ ಫೋಟೊಗ್ರಾಫರ್ ಬಳಿ ಕ್ಷಮೆಯಾಚಿಸಿದ್ದಾರೆ. ಜತೆಗೆ ಭದ್ರತಾ ಸಿಬ್ಬಂದಿಗೂ ಸಾರಿ ಕೇಳುವಂತೆ ಸೂಚಿಸಿದ್ದಾರೆ.

ಸಾರಾ ಅವರ ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ನಟಿಯ ನಡೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು