ಶುಕ್ರವಾರ, ನವೆಂಬರ್ 22, 2019
23 °C

ಕಾರ್ತಿಕ್‌ ಜೊತೆ ಸಾರಾ ಬ್ರೇಕ್‌ಅಪ್‌

Published:
Updated:

ಕಳೆದ ಕೆಲ ದಿನಗಳಿಂದ ಕಾರ್ತಿಕ್‌ ಆರ್ಯನ್‌ ಹಾಗೂ ಸಾರಾ ಅಲಿ ಖಾನ್‌ ಹೆಸರು ಬಾಲಿವುಡ್‌ನಲ್ಲಿ ಹೆಚ್ಚು ಕೇಳಿಬರುತ್ತಿತ್ತು. ಇವರಿಬ್ಬರೂ ಮುಂಬೈನಲ್ಲಿ ಒಟ್ಟಿಗೆ ಸುತ್ತಾಡುವುದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರಿಂದ  ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು.

ಈಗ ಕಾರ್ತಿಕ್‌ ಹಾಗೂ ಸಾರಾ ವೃತ್ತಿ ದೃಷ್ಟಿಯಿಂದ  ತಮ್ಮ ಸಂಬಂಧವನ್ನು ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಎಂದು ಬಿ–ಟೌನ್‌ನಲ್ಲಿ ಸುದ್ದಿಯಾಗಿದೆ.

ಕರಣ್‌ಜೋಹರ್‌ ಅವರ ಷೋದಲ್ಲಿ ಸಾರಾ, ‘ಕಾರ್ತಿಕ್‌ ಜೊತೆ ಡೇಟಿಂಗ್‌ ಮಾಡಲು ಇಷ್ಟ’ ಎಂದು ಹೇಳಿಕೊಂಡಿದ್ದರು. ಹಾಗೇ  ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಆಪ್ತವಾಗಿ ಮಾತನಾಡುತ್ತಿದ್ದ ದೃಶ್ಯವೂ ವೈರಲ್‌ ಆಗಿತ್ತು.

ಈಗ ಇಬ್ಬರೂ ವೃತ್ತಿ ಬದ್ಧತೆ ಹಾಗೂ ಕೆರಿಯರ್‌ ಮುಖ್ಯವಾಗಿಸಿಕೊಂಡು, ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರಂತೆ. ಇಬ್ಬರೂ ತಮ್ಮ ಸಮಯವನ್ನು ಉತ್ತಮ ಸಿನಿಮಾ ಮಾಡಲು ವಿನಿಯೋಗಿಸಲಿದ್ದಾರಂತೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೈಫ್‌ ಅಲಿ ಖಾನ್‌ ‘ಸಾರಾ ಒಳ್ಳೆಯ ವ್ಯಕ್ತಿಗಳ ಒಡನಾಟವನ್ನು ತುಂಬ ಇಷ್ಟಪಡುತ್ತಾಳೆ. ಸಾರಾ ಅವನನ್ನು ಇಷ್ಟಪಡುತ್ತಾಳೆ ಎಂದರೆ ಅವಳ ನಂಬಿಕೆಗೆ ಅವನು ಅರ್ಹ ಎಂದರ್ಥ’ ಎಂದು ಹೇಳಿದ್ದರು.

ಸಾರಾ ಹಾಗೂ ಕಾರ್ತಿಕ್‌, ಇಮ್ತಿಯಾಜ್‌ ಅಲಿ ಅವರ ‘ಲವ್‌ ಆಜ್‌ಕಲ್‌’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ.

 

ಪ್ರತಿಕ್ರಿಯಿಸಿ (+)