ಬೆಂಗಳೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ.
ಜತೆಗೆ ಹೊಸ ತಾಣಗಳಿಗೆ ಭೇಟಿ ನೀಡುವುದು ಮತ್ತು ಪ್ರವಾಸದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವುದು ಕೂಡ ಸಾರಾಗೆ ಅಚ್ಚುಮೆಚ್ಚು.
ಈ ಬಾರಿ ಸಾರಾ ಅಲಿ ಖಾನ್, ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಹಜವೆಂಬಂತೆ ಬಿಕಿನಿ ಧರಿಸಿ, ಬೀಚ್ ಬಳಿ ನಿಂತಿರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾರಾ ಅಲಿ ಖಾನ್ ಅವರ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಫೋಟೊಗೆ ಆಕರ್ಷಕ ಅಡಿಬರಹ ನೀಡುವ ಅಭ್ಯಾಸವೂ ಸಾರಾ ಅವರಿಗಿದೆ.
ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಗೆಳತಿಯರನ್ನು ಕೂಡ ಕರೆದುಕೊಂಡು ಹೋಗುವುದು ಸಾರಾ ಅವರಿಗೆ ಮೆಚ್ಚಿನ ಕೆಲಸ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.