ಭಾನುವಾರ, ಜನವರಿ 19, 2020
22 °C

ಏಡ್ಸ್‌ ಪೀಡಿತರಿಗೆ ಸಹಾಯಹಸ್ತ ಸಾರಾ ಮತ್ತು ಸಮಾಜಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರ ನಿರ್ಮಾಪಕ ಬೋನಿ ಕಪೂರ್ ಪುತ್ರಿ ಮತ್ತು ನಟ ಅರ್ಜುನ್‌ ಕಪೂರ್‌ ಸಹೋದರಿ ಅಂಶುಲಾ ಕಪೂರ್‌ ಆರಂಭಿಸಿರುವ ಫ್ಯಾನ್‌ಕೈಂಡ್‌ ಎನ್‌ಜಿಒ ಜತೆ ಚಾರ್ಮಿಂಗ್‌ ನಟಿ ಸಾರಾ ಅಲಿಖಾನ್‌ ಕೈ ಜೋಡಿಸಿದ್ದಾರೆ. 

ಎಚ್‌ಐವಿ ಮತ್ತು ಏ್ಸಡ್ಸ್‌ ಪೀಡಿತ ಮಕ್ಕಳು ಮತ್ತು ಕುಟುಂಬಗಳಿಗೆ ಅಗತ್ಯ ಆರ್ಥಿಕ ನೆರವು ಒದಗಿಸಲು ಫ್ಯಾನ್‌ಕೈಂಡ್‌ ಸಂಸ್ಥೆ ಆನ್‌ಲೈನ್‌ನಲ್ಲಿ ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುತ್ತದೆ.   

ಮಾನವೀಯ ಕಾರ್ಯಕ್ಕೆ ಉದಾರ ದೇಣಿಗೆ ನೀಡುವ ದಾನಿಗಳು ಸಾರಾ ಅಲಿಖಾನ್‌ ಜತೆ ಮುಂದಿನ ಚಿತ್ರ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಸಾರಾ ನಟಿಸಿರುವ ಮತ್ತು ಇಮ್ತಿಯಾಜ್‌ ಅಲಿಖಾನ್‌ ನಿರ್ದೇಶನದ ಚಿತ್ರ ಬಿಡುಗಡೆಗೂ ಮುನ್ನ ಗಣ್ಯರಿಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದಾನಿಗಳು ಸಾರಾ ಜತೆ ಕುಳಿತು ಈ ಚಿತ್ರ ವೀಕ್ಷಿಸಬಹುದಾಗಿದೆ. 

ಪ್ರತಿಕ್ರಿಯಿಸಿ (+)