ಮಂಗಳವಾರ, ಏಪ್ರಿಲ್ 20, 2021
26 °C

48 ಗಂಟೆಗಳಲ್ಲಿ 1.12 ಕೋಟಿ ಮಂದಿ ವೀಕ್ಷಿಸಿದ ಸಾಯಿ ಪಲ್ಲವಿಯ ‘ಸಾರಂಗ ಧರಿಯಾ’ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ನಟನೆಯ 'ಲವ್‌ಸ್ಟೋರಿ' ಸಿನಿಮಾದ ಸಾರಂಗ ಧರಿಯಾ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಜಾನಪದ ಹಿನ್ನೆಲೆಯಳ್ಳ ಈ ಹಾಡಿನಲ್ಲಿ ಮತ್ತೆ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ. ಹಾಡು ಬಿಡುಗಡೆಯಾದ 48 ಗಂಟೆಗಳಲ್ಲಿ 1.12 ಕೋಟಿಗೂ ಅಧಿಕ ಮಂದಿ ವೀಕ್ಷಿಸಲ್ಪಟ್ಟಿದ್ದು ಮತ್ತೊಮ್ಮೆ ಸೊಂಟ ಬಳುಕಿಸುವ ಮೂಲಕ ಟ್ರೆಂಡ್ ಸೃಷ್ಟಿಸಿದ್ದಾರೆ ಸಾಯಿ.

ಹಿಂದೆ 'ಫಿದಾ' ಸಿನಿಮಾದಲ್ಲೂ ತಮ್ಮ ಅದ್ಭುತ ನೃತ್ಯದ ಮೂಲಕ ಜನ ಮನ ಗೆದಿದ್ದರು ಸಾಯಿಪಲ್ಲವಿ. ಸಾರಂಗ ಧರಿಯಾ ಹಾಡಿಗೆ ಖ್ಯಾತ ತೆಲುಗು ಗಾಯಕಿ ಮಂಗಲಿ ದನಿ ನೀಡಿದ್ದಾರೆ. ತೆಲಂಗಾಣ ನೇಟಿವಿಟಿಗೆ ತಕ್ಕಂತಹ ಜಾನಪದ ಹಾಡು ಇದಾಗಿದ್ದು ಸಂಪೂರ್ಣ ಹಾಡನ್ನು ಥಿಯೇಟರ್‌ನಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಸುದ್ದಲ ಅಶೋಕ್ ತೇಜ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ, ಪವನ್ ಸಿಎಚ್‌ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಈ ಹಿಂದೆ ವರುಣ್ ತೇಜ್ ಹಾಗೂ ಸಾಯಿ ಪಲ್ಲವಿ ನಟನೆಯ ಫಿದಾ ಸಿನಿಮಾದ ವಚ್ಚಿಂದೆ ಹಾಡು ಟಾಲಿವುಡ್‌ನಲ್ಲಿ ಇತಿಹಾಸ ಸೃಷ್ಟಿಸಿತ್ತು. ಈಗಲೂ ಟಾಲಿವುಡ್‌ನಲ್ಲಿ ಅತೀ ಹೆಚ್ಚು ಮಂದಿ ನೋಡಿದ ಹಾಡಿನಲ್ಲಿ ವಚ್ಚಿಂದೆ ಹಾಡು ಮೊದಲ ಸ್ಥಾನದಲ್ಲಿದೆ. ಶೇಖರ್‌ ಕಮ್ಮುಲ ನಿರ್ದೇಶನದ ಲವ್‌ಸ್ಟೋರಿ ಸಿನಿಮಾದಲ್ಲಿ ರೇವಂತ್ ಹಾಗೂ ಮೋನಿಕಾ ‍ಪಾತ್ರದಲ್ಲಿ ನಾಗಚೈತನ್ಯ ಹಾಗೂ ಸಾಯಿಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವೂ ಏಪ್ರಿಲ್‌ 16ಕ್ಕೆ ಬಿಡುಗಡೆಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು