ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್‌ ನಿಧನ

Last Updated 24 ಫೆಬ್ರುವರಿ 2021, 11:18 IST
ಅಕ್ಷರ ಗಾತ್ರ

ಖ್ಯಾತ ಪಂಜಾಬಿ ಗಾಯಕ ಶಾರ್ದೂಲ್‌ ಸಿಕಂದರ್ ಇಂದು ನಿಧನರಾಗಿದ್ದಾರೆ. 60 ವರ್ಷದ ಈ ಗಾಯಕ ಕೋವಿಡ್‌ ಪಾಸಿಟಿವ್ ಬಂದ ಕಾರಣ ಮೊಹಾಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಸಾವಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ ಸಿನಿರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇವರ ಸಾವಿಗೆ ಟ್ವಿಟರ್‌ ಮೂಲಕ ಸಂತಾಪ ಸೂಚಿಸುವ ಮೂಲಕ ಖಚಿತಪಡಿಸಿದ್ದಾರೆ ಪಂಜಾಬ್ ಮುಖ್ಯಮಂತ್ರಿ. ‘ಖ್ಯಾತ ಪಂಜಾಬಿ ಗಾಯಕ ಶಾರ್ದೂಲ್‌ ಸಿಕಂದರ್ ಅವರ ಸಾವಿನ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಇತ್ತೀಚೆಗೆ ಅವರಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಕಳೆದುಕೊಂಡು ಪಂಜಾಬ್ ಸಂಗೀತ ಕ್ಷೇತ್ರ ಬಡವಾಗಿದೆ. ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ’ ಎಂದು ಬರೆದುಕೊಂಡಿದ್ದಾರೆ.

Extremely saddened to learn of the demise of legendary Punjabi singer Sardool Sikander. He was recently diagnosed with #Covid19 and was undergoing treatment for the same. The world of Punjabi music is poorer today. My heartfelt condolences to his family and fans. pic.twitter.com/PDaELYIPbZ

ಖ್ಯಾತ ತಬಲ ವಾದಕ ಸಾಗರ್ ಮಸ್ತಾನ ಅವರ ಮಗನಾಗಿರುವ ಶಾರ್ದೂಲ್ 80ರ ದಶಕದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 25ಕ್ಕೂ ಹೆಚ್ಚು ಅಲ್ಬಂ ಹಾಡುಗಳನ್ನು ಹೊರತಂದಿದ್ದರು. ಪಂಜಾಜಿ ಚಿತ್ರಗಳಲ್ಲೂ ಇವರು ಕೆಲಸ ಮಾಡಿದ್ದರು.

ಹಾಸ್ಯ ನಿರೂಪಕ ಕಪಿಲ್ ಶರ್ಮಾ, ಗಾಯಕರಾದ ಗುರದಾಸ್ ಮನ್‌, ದಾಲೆರ್ ಮೆಹಂದಿ, ಹರ್ಷದೀಪ್ ಕೌರ್‌ ಸೇರಿದಂತೆ ಅನೇಕರು ಟ್ವಿಟರ್‌ನಲ್ಲಿ ಶಾರ್ದೂಲ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT