ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಬರಲು ಸಿದ್ಧನಾದ ‘ಸತ್ಯಂ’: ಸಂತೋಷ್, ರಂಜನಿ ರಾಘವನ್‌ ನಟನೆ

Published 14 ಡಿಸೆಂಬರ್ 2023, 19:17 IST
Last Updated 14 ಡಿಸೆಂಬರ್ 2023, 19:17 IST
ಅಕ್ಷರ ಗಾತ್ರ

‘ಕರಿಯ-2’, ‘ಗಣಪ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಸಂತೋಷ್ ಹಾಗೂ ರಂಜನಿ ರಾಘವನ್‌ ನಟನೆಯ ‘ಸತ್ಯಂ’ ಸಿನಿಮಾ ಶೀಘ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಸತ್ಯಂ ಚಿತ್ರಕ್ಕೆ ಅಶೋಕ್ ಕಡಬ ನಿರ್ದೇಶನವಿದೆ. 

‘ಇತ್ತೀಚೆಗಷ್ಟೇ ಚಿತ್ರದ ಟೀಸರ್‌ ಬಿಡುಗಡೆಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ಕಾಲಘಟ್ಟಗಳ ಕಥೆ. ಕರಾವಳಿ ಭಾಗದಲ್ಲಿ ನಡೆಯುವಂತಹ ಭೂತ ಕೋಲದ ಸನ್ನಿವೇಶಗಳು ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ಅಶೋಕ್‌. 

‘‘ನನ್ನ ಹಿಂದಿನ ಎಲ್ಲಾ ಚಿತ್ರಗಳಿಗಿಂತ ‘ಸತ್ಯಂ’ ವಿಭಿನ್ನ ಪರಿಕಲ್ಪನೆಯ ಚಿತ್ರ. ಟೀಸರ್‌ ವೀಕ್ಷಿಸಿದವರ ಸಂಖ್ಯೆ 10 ಲಕ್ಷ ದಾಟಿದೆ. ನಮ್ಮ ತಂದೆ (ದಿ. ಆನೇಕಲ್ ಬಾಲರಾಜ್) ಕೂಡ ಕಥೆಯನ್ನು ಇಷ್ಟಪಟ್ಟಿದ್ದರು’’ ಎಂದು ನಾಯಕ ಸಂತೋಷ್ ಹೇಳಿದ್ದಾರೆ.

ಮಾಂತೇಶ್ ವಿ.ಕೆ. ಈ ಚಿತ್ರದ ನಿರ್ಮಾಪಕ. ಕನ್ನಡ ಹಾಗೂ ತೆಲುಗಿನಲ್ಲಿ ‘ಸತ್ಯಂ’ ರಿಲೀಸ್ ಆಗಲಿದೆ. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದು, ಸಿನಿಟೆಕ್ ಸೂರಿ ಛಾಯಾಚಿತ್ರಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT