ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧದ ಪ್ರಕರಣ ಕೈಬಿಟ್ಟ ಸೆಬಿ

Last Updated 3 ಆಗಸ್ಟ್ 2021, 15:03 IST
ಅಕ್ಷರ ಗಾತ್ರ

ನವದೆಹಲಿ: ಷೇರು ಮಾಹಿತಿ ಬಹಿರಂಗಪಡಿಸದ ಆರೋಪಕ್ಕೆ ಸಂಬಂಧಿಸಿ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಕೈಬಿಟ್ಟಿದೆ.

ವಿಯಾನ್ ಇಂಡಸ್ಟ್ರೀಸ್‌ನಲ್ಲಿ ಹೊಂದಿದ್ದ ಷೇರುಗಳ ಬಗ್ಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ‘ಎಸ್‌ಎಎಸ್‌ಟಿ (ಸಬ್‌ಸ್ಟಾನ್ಷಿಯಲ್ ಅಕ್ವಿಸಿಷನ್ ಆಫ್ ಷೇರ್ಸ್ ಅಂಡ್ ಟೇಕೋವರ್ಸ್ ರೆಗ್ಯುಲೇಷನ್ಸ್) ನಿಯಂತ್ರಣ’ ನಿಯಮದ ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಆದರೆ, ‘ಎಸ್‌ಎಎಸ್‌ಟಿ ನಿಯಂತ್ರಣ ನಿಯಮದ ಪ್ರಕಾರ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಷೇರುಗಳ ಮಾಹಿತಿ ಬಹಿರಂಗಪಡಿಸಬೇಕಾದ ಅಗತ್ಯವಿಲ್ಲ. ಅವರು ನಿಯಮ ಉಲ್ಲಂಘಿಸಿದ್ದಾರೆ ಎಂದು ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಿರುವುದು ಸಮರ್ಥನೀಯವಲ್ಲ’ ಎಂದು ಜುಲೈ 30ರಂದು ನೀಡಿದ ಆದೇಶದಲ್ಲಿ ಸೆಬಿ ಹೇಳಿದೆ.

ವಿಯಾನ್ ಇಂಡಸ್ಟ್ರೀಸ್‌ ವ್ಯವಹಾರದ ಬಗ್ಗೆ 2013ರ ಸೆಪ್ಟೆಂಬರ್‌ನಿಂದ 2015ರ ಡಿಸೆಂಬರ್ ಅವಧಿಯಲ್ಲಿ ಸೆಬಿ ತನಿಖೆ ನಡೆಸಿತ್ತು. 2015ರ ಮಾರ್ಚ್‌ನ್‌ನಲ್ಲಿ ಶೇ 25.75ರಷ್ಟು ಷೇರು ಹೊಂದುವ ಮೂಲಕ ಶಿಲ್ಪಾ ಹಾಗೂ ಕುಂದ್ರಾ ಕಂಪನಿಯ ಪ್ರವರ್ತಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT