ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು

‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಎನ್ನುವುದು ವೀಕ್ಷಕರನ್ನು ರಂಜಿಸಲು ತೆರೆಗೆ ಬರಲು ಸಿದ್ಧವಾಗುತ್ತಿರುವ ಹೊಸ ಸಿನಿಮಾದ ಹೆಸರು. ಇದು ಕಲಾತ್ಮಕ ಚಿತ್ರ ಎಂದು ಸಿನಿತಂಡ ಹೇಳಿಕೊಂಡಿದೆ. ಈ ಚಿತ್ರದ ಹಾಡುಗಳ ಸಿ.ಡಿ. ಬಿಡುಗಡೆ ನಡೆಯಿತು. ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತವರು ಅಶೋಕ್ ಕೆ. ಕಡಬ. ಬಿ. ಹನುಮಂತರಾಜು ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಈ ಚಿತ್ರದ ನಿರ್ದೇಶಕರು ತಮ್ಮದು ಕಲಾತ್ಮಕ ಚಿತ್ರ ಎಂದು ಹೇಳಿಕೊಂಡಿರುವುದು ಅವರ ದೊಡ್ಡತನ ತೋರಿಸುತ್ತದೆ. ಚಿತ್ರದ ಶೀರ್ಷಿಕೆ ಗಮನ ಸೆಳಯುವಂತೆ ಇದೆ. ಸದ್ಯದ ಸಂದರ್ಭದಲ್ಲಿ ಯಾವ ಸಿನಿಮಾಗಳೂ ನಿಲ್ಲುತ್ತಿಲ್ಲ. ವರ್ಷಕ್ಕೆ ಹೆಚ್ಚು ಚಿತ್ರಗಳು ತೆರೆಗೆ ಬರುತ್ತಿರುವುದು ಮಾರಕವಾಗಿದೆ. ಚಿತ್ರರಂಗ ಅಭಿವೃದ್ಧಿ ಆಗುತ್ತಿದ್ದರೂ ಯಶಸ್ಸು ಸಿಗುತ್ತಿಲ್ಲ’ ಎಂದರು ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು.
ಈ ಕಥೆಯ ನಾಯಕ ಪತ್ರಕರ್ತ. ಆತ ಒಂದು ವರದಿಯ ಕೆಲಸಕ್ಕಾಗಿ ಒಂದೂರಿಗೆ ಹೋಗುತ್ತಾನೆ. ಅಲ್ಲಿ ವಿಧವೆ ನಾಯಕಿಯನ್ನು ಭೇಟಿಯಾಗುತ್ತಾನೆ. ಆತ ಆಕೆಗೆ ಹೊಸ ಬಾಳು ಕೊಡುತ್ತಾನಾ, ಇಲ್ಲವಾ ಎಂಬುದು ಕಥೆಯ ಹಂದರ. ಅಂದಹಾಗೆ, ನಂದೀಶ್ ಅವರು ನಾಯಕನಾಗಿ, ಸಂಹಿತಾ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ವೆಂಕಟೇಶ್ ಅವರು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.