ಸೋಮವಾರ, ಜೂನ್ 14, 2021
23 °C

ಹಿರಿಯ ನಟಿ ಹೇಮಾ ಮಾಲಿನಿ ಅವರ ಆಪ್ತ ಕಾರ್ಯದರ್ಶಿ ಕೋವಿಡ್‌ನಿಂದ ನಿಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋವಿಡ್ ಸೋಂಕಿನಿಂದ ಉಲ್ಬಣಗೊಂಡ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ಸೆಕ್ರೆಟರಿ ಮೃತಪಟ್ಟಿರುವುದಾಗಿ ಹಿರಿಯ ನಟಿ ಮತ್ತು ಲೋಕಸಭಾ ಸದಸ್ಯೆ (ಮಥುರಾ) ಹೇಮಾ ಮಾಲಿನಿ ತಿಳಿಸಿದ್ದಾರೆ.

ಕುಟುಂಬದ ಸದಸ್ಯರಂತಿದ್ದ ಮೆಹ್ತಾ ಅವರನ್ನು ಕಳೆದುಕೊಂಡು ಅತೀವ ದುಃಖವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನಕಲಕುವ ಪೋಸ್ಟ್ ಹಾಕುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಭಾರವಾದ ಹೃದಯದಿಂದ ನಾನು ನನ್ನ ಸಹಚರ, ನನ್ನ ಕಾರ್ಯದರ್ಶಿ, ಕಠಿಣ ಪರಿಶ್ರಮಿ, ದಣಿವರಿಯದ ಮೆಹ್ತಾ ಜಿ ಅವರಿಗೆ ವಿದಾಯ ಹೇಳಿದೆ. ಅವರು ನನ್ನ ಕುಟುಂಬದ ಭಾಗವೆನ್ನುದಕ್ಕಿಂತ ಹೆಚ್ಚಾಗಿದ್ದರು. ಕೋವಿಡ್‌ನಿಂದಾಗಿ ನಾವು ಅವರನ್ನು ಕಳೆದುಕೊಂಡೆವು. ಅವರ ಜಾಗವನ್ನು ಯಾರೂ ತುಂಬಲಾರರು’ಎಂದು ಟ್ವಿಟರ್‌ನಲ್ಲಿ ಮೆಹ್ತಾ ಅವರ ಚಿತ್ರಗಳೊಂದಿಗೆ ಪೋಸ್ಟ್ ಮಾಡಿದ್ದಾರೆ.

80ರ ಹರೆಯದಲ್ಲಿದ್ದ ಮೆಹ್ತಾ ಅವರನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಮಾಮಾಲಿನಿ ಮಗಳು ನಟಿ ಇಶಾ ಡಿಯೋಲ್ ಹೇಳಿದ್ದಾರೆ.

"ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ಅವರ ಸ್ಥಾನವನ್ನು ಯಾರೂ ತುಂಬಲಾಗದು. ಅವನು ನಿನಗೆ ಅತ್ಯುತ್ತಮ ವ್ಯಕ್ತಿಯಾಗಿದ್ದರು. ಎಂತಹ ಸಮರ್ಪಿತ ಮನುಷ್ಯ. ನಮ್ಮ ಪ್ರೀತಿಯ ಮೆಹ್ತಾ ಅಂಕಲ್ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರ ಆತ್ಮ ಶಾಂತಿ ಸಿಗಲಿ’ ಎಂದು ಡಿಯೋಲ್ ಬರೆದುಕೊಂಡಿದ್ದಾರೆ.

ನಟಿ ರವೀನಾ ಟಂಡನ್ ಮತ್ತು ಸಿಂಗರ್ ಪಂಕಜ್ ಉಧಾಸ್ ಸಹ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು