ಪ್ರಸಕ್ತ ಸಾಲಿನ ಏಷ್ಯಾದ ಟಾಪ್ 10 ಸೆಕ್ಸಿ ಪುರುಷರ ಪಟ್ಟಿಯಲ್ಲಿ ‘ಗ್ರೀಕ್ ಗಾಡ್ ಆಫ್ ಬಾಲಿವುಡ್‘ ಎಂದು ಖ್ಯಾತಿಯಾದ ಹೃತಿಕ್ ರೋಷನ್ ಮೊದಲ ಸ್ಥಾನದಲ್ಲಿದ್ದಾರೆ. ‘ಬಾಹುಬಲಿ’ ಖ್ಯಾತಿ ಪ್ರಭಾಸ್ ಕೂಡ ಈ ಪಟ್ಟಿಯಲ್ಲಿದ್ದಾರೆ.

ಬ್ರಿಟನ್ ಮೂಲದ ವಾರಪತ್ರಿಕೆ ‘ಈಸ್ಟರ್ನ್ ಐ’ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಶಾಹಿದ್ ಕಪೂರ್, ವಿವಿಯನ್ ಡ್ಸೆನಾ, ಟೈಗರ್ ಶ್ರಾಫ್, ಬ್ರಿಟಿಷ್–ಏಷ್ಯಯನ್ ಪಾಪ್ ಸ್ಟಾರ್ ಝಾನ್ ಮಲಿಕ್ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಬರಲಿದೆ ಹೃತಿಕ್ ರೋಷನ್ ನಟನೆಯ ವಾರ್ ಸಿನಿಮಾದ ಸೀಕ್ವೆಲ್

ದಕ್ಷಿಣ ಭಾರತದ ನಟ, ರೂಪದರ್ಶಿಗಳ ಪೈಕಿ ಪ್ರಭಾಸ್ ಮಾತ್ರ ಈ ಪಟ್ಟಿಯಲ್ಲಿದ್ದಾರೆ.ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಏಳನೇ ಕ್ರಮಾಂಕದಲ್ಲಿದ್ದಾರೆ.

‘ಇದೊಂದು ಸಾಧನೆ ಅಲ್ಲ. ವ್ಯಕ್ತಿಯ ಹೊರನೋಟ ನೋಡಿ ಆತನ ವ್ಯಕ್ತಿತ್ವ ಅಳೆಯಲು ಸಾಧ್ಯವಿಲ್ಲ. ನಾನು ಹೇಗೆ ಕಾಣುತ್ತೇನೆ ಎನ್ನುವುದು ಮುಖ್ಯವಲ್ಲ. ನನ್ನ ವ್ಯಕ್ತಿತ್ವ ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ಹೃತಿಕ್ ಪ್ರತಿಕ್ರಿಯಿಸಿದ್ದಾರೆ.

ಗ್ರೀಕ್ ದೇವತೆಯಂತೆ ಸುಂದರ ಅಂಗಸೌಷ್ಠವ ಹೊಂದಿರುವುದೇ ಹೃತಿಕ್ ರೋಷನ್ ಆಕರ್ಷಕ ವ್ಯಕ್ತಿತ್ವದ ಗುಟ್ಟು ಎಂದು ಮತ ಹಾಕಿದವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.