ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರುಕ್‌ ಖಾನ್‌ ನಟನೆಯ ಹೊಸ ಚಿತ್ರದ ಹೆಸರೇನು?

Last Updated 12 ಸೆಪ್ಟೆಂಬರ್ 2020, 8:07 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಶಾರುಕ್‌ ಖಾನ್‌ ನಟಿಸಿದ ಕೊನೆಯ ಚಿತ್ರ ‘ಜೀರೊ’. ಇದು ತೆರೆಕಂಡಿದ್ದು 2018ರಲ್ಲಿ. ಆನಂದ್‌ ಎಲ್‌. ರೈ ನಿರ್ದೇಶಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಕಳೆದ ಎರಡು ವರ್ಷಗಳಿಂದಲೂ ಶಾರುಕ್‌ ಖಾನ್ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಹೊಸ ಸಿನಿಮಾ ಕೂಡ ಘೋಷಿಸಿಲ್ಲ. ಈಗ ಯಶ್‌ ರಾಜ್‌ ಫಿಲ್ಮ್ಸ್‌ನ ‘ಪಠಾಣ್‌’ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

ಸಿದ್ಧಾರ್ಥ ಆನಂದ್‌ ಆ್ಯಕ್ಷನ್‌ ಕಟ್‌ ಹೇಳಲಿರುವ ಈ ಚಿತ್ರದಲ್ಲಿ ಜಾನ್‌ ಅಬ್ರಹಾಂ ಕೂಡ ನಟಿಸಲಿದ್ದಾರಂತೆ. ಪಕ್ಕಾ ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ ಇದು. 2021ರ ಜನವರಿ ವೇಳೆಗೆ ಇದರ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. ಅದೇ ತಿಂಗಳಲ್ಲಿ ಶಾರುಕ್‌ ನಟನೆಯ ಭಾಗದ ಚಿತ್ರೀಕರಣ ನಡೆಯಲಿದೆ. ಮಾರ್ಚ್‌ಗೆ ಜಾನ್‌ ಅಬ್ರಹಾಂ ಸೆಟ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.

ಶಾರುಕ್‌ ಇದರಲ್ಲಿ ನಾಯಕನಾಗಿ ನಟಿಸಿದರೆ ಜಾನ್‌ ಅಬ್ರಹಾಂ ಅವರದ್ದು ವಿಲನ್‌ ಪಾತ್ರ. ಹಲವು ವರ್ಷಗಳ ಬಳಿಕ ಅವರು ಖಳನಟನಾಗಿ ನಟಿಸುತ್ತಿದ್ದಾರೆ. ಅವರು ನಟಿಸಿದ ಕಳೆದ ವರ್ಷ ತೆರೆಕಂಡ ‘ಬಾಟ್ಲ ಹೌಸ್’ ಮತ್ತು ‘ರೋಮಿಯೊ ಅಕ್ಬರ್ ವಾಲ್ಟರ್’ ಸಿನಿಮಾಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT