ಸೋಮವಾರ, ಮೇ 16, 2022
28 °C

ದಳಪತಿ ವಿಜಯ್ ‘ಬೀಸ್ಟ್‌’ ಸಿನಿಮಾ ಟ್ರೈಲರ್ ನೋಡಿ ಶಾರುಖ್ ಖಾನ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಡುಗಡೆಗೂ ಮುನ್ನವೇ ತಮಿಳು ನಟ ದಳಪತಿ ವಿಜಯ್‌ ಅವರ ’ಬೀಸ್ಟ್‌‘ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೇ ಏಪ್ರಿಲ್ 13 ರಂದು ತೆರೆಗೆ ಬರಲಿದೆ.

ಸಿನಿಮಾದ ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಕುವೈತ್‌ನಲ್ಲಿ ತಮಿಳು ನಟ ವಿಜಯ್​ ಅಭಿನಯದ ‘ಬೀಸ್ಟ್’ ಸಿನಿಮಾ ನಿಷೇಧ: ವರದಿ

‘ನಿರ್ದೇಶಕ ಆಟ್ಲಿ ಜೊತೆ ಕುಳಿತು ಬೀಸ್ಟ್ ಟ್ರೈಲರ್ ನೋಡಿದೆ. ಅದ್ಭುತವಾಗಿದೆ. ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆಟ್ಲಿ ಅವರಂತೆ ನಾನು ಕೂಡ ವಿಜಯ್ ಅವರ ದೊಡ್ಡ ಅಭಿಮಾನಿ’ ಎಂದು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಬೀಸ್ಟ್‌ ವಿಜಯ್ ಅವರ 65 ನೇ ಚಿತ್ರವಾಗಿದೆ.

ಇನ್ನು ಈ ಟ್ವೀಟ್ ಹಂಚಿಕೊಂಡಿರುವ ಆಟ್ಲಿ ಅವರು ಶಾರುಖ್‌ಗೆ ಧನ್ಯವಾದ ಹೇಳಿದ್ದಾರೆ. ಮರ್ಷಲ್, ಬಿಗಿಲ್ ನಿರ್ದೇಶಕ ಎಂಬ ಖ್ಯಾತಿಯ ಆಟ್ಲಿ ಶಾರುಖ್ ಖಾನ್ ಅವರ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನದ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪದ ಮೇಲೆ ಬೀಸ್ಟ್‌ ಸಿನಿಮಾವನ್ನು ಕುವೈತ್‌ನಲ್ಲಿ ಬಿಡುಗಡೆಗೂ ಮುನ್ನವೇ ನಿಷೇಧ ಮಾಡಲಾಗಿದೆ ಎಂಬ ವರದಿಗಳು ಬಂದಿವೆ.

ಗೋವಾದಲ್ಲಿ ಸಬಾ ಜತೆ ಹೃತಿಕ್ ರೋಷನ್ ಪಾರ್ಟಿ: ಮಾಜಿ ಪತ್ನಿ ಸುಸಾನೆ ಖಾನ್ ಹಾಜರು?

ಬೀಸ್ಟ್‌ ಟ್ರೈಲರ್ ಸನ್‌ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಮೂರೇ ದಿನದಲ್ಲಿ 55 ಮಿಲಿಯನ್ ವೀಕ್ಷಣೆ ಆಗಿದೆ. ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ವಿಜಯ್‌ ಜೊತೆಯಾಗಿ ನಟಿಸುತ್ತಿದ್ದಾರೆ.

ಏಪ್ರಿಲ್ 14 ರಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಲಿದೆ. ಬಾಕ್ಸ್‌ ಆಫೀಸ್‌ನಲ್ಲಿ ಎರಡೂ ಚಿತ್ರಗಳಿಗೆ ಘರ್ಷಣೆ ಏರ್ಪಡಲಿದೆ ಎಂದು ಸಿನಿಮಾ ತಜ್ಞರು ಹೇಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು