ಬಾಲಿವುಡ್ ನಟಿ ಅನುಷ್ಕಾ ಶರ್ಮಾ ‘ಪಾತಾಳ ಲೋಕ’ ವೆಬ್ ಸರಣಿ ನಿರ್ಮಾಣ ಮಾಡಿದ್ದು ಸುದ್ದಿಯಾಗಿತ್ತು. ಈಗ ಅದೇ ರೀತಿ ಖ್ಯಾತ ಬಾಲಿವುಡ್ ಶಾರೂಖ್ ಖಾನ್‌ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಸಂಸ್ಥೆ ‘ಬೇತಾಳ್’ ವೆಬ್ ಸರಣಿ ನಿರ್ಮಿಸುತ್ತಿದೆ. ಈ ವೆಬ್ ಸರಣಿಯ ಮೊದಲ ಲುಕ್ ‘ನೆಟ್‌ಫ್ಲಿಕ್ಸ್’ನಲ್ಲಿ ಬಿಡುಗಡೆಯಾಗಿದೆ.

ಈಗ ವೆಬ್‌ಸರಣಿಗಳಲ್ಲಿ ಥ್ರಿಲರ್, ಹಾರರ್ ಕಥೆಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಸ್ಟಾರ್ ಕಲಾವಿದರಿರುವಂತಹ ನಿರ್ಮಾಣ ಸಂಸ್ಥೆಗಳು ದೆವ್ವದ ಕತೆಗಳ ವೆಬ್ ಸರಣಿ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿವೆ.

ಶಾರೂಖ್ ಖಾನ್ ನಿರ್ಮಿಸಿರುವ ಈ ವೆಬ್ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ತಿಂಗಳ 24ಕ್ಕೆ ಬಿಡುಗಡೆ ಆಗಲಿದೆ. ಪೊಲೀಸ್ ಅಧಿಕಾರಿಗಳು ಮತ್ತು ಹಳ್ಳಿಗರನ್ನು ಕಾಡುತ್ತಿರುವ ಬ್ರಿಟಿಷ್ ಅಧಿಕಾರಿಯೊಬ್ಬನ ಆತ್ಮ ಮತ್ತು ಅವನ ಸೈನಿಕರ ಆತ್ಮಗಳ ನಡುವಿನ ಕಥೆ ಆಧರಿಸಿದ ಸರಣಿ ಇದು. ಈ ಸರಣಿಯನ್ನು ಪ್ರತಿಕ್ ಗ್ರಾಹ್ಮನ್ ಮತ್ತು ನಿಖಿಲ್ ಮಹಾಜನ್ ನಿರ್ದೇಶಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಶಾರೂಖ್ ಖಾನ್ ನೆಟ್‌ಫ್ಲಿಕ್ಸ್‌ಗಾಗಿ ‘ಬಾರ್ಡ್ ಆಫ್ ಬ್ಲಡ್’ ವೆಬ್ ಸರಣಿ ನಿರ್ಮಾಣ ಮಾಡಿದ್ದರು. ಈ ಸರಣಿ ಸೂಪರ್ ಹಿಟ್ ಆಗಿತ್ತು. ಇದು ಬಿಲಾಲ್ ಸಿದ್ಧಿಕಿ ಅವರ ಇದೇ ಹೆಸರಿನ ಕಾದಂಬರಿ ಆಧರಿತ ವೆಬ್ ಸರಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.