ಶನಿವಾರ, ಜುಲೈ 2, 2022
20 °C

ಆನ್‌ಲೈನ್‌ನಲ್ಲಿ ಸೋರಿಕೆಯಾದ ಶಾಹಿದ್ ಕಪೂರ್ ಜೆರ್ಸಿ ಸಿನಿಮಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

dh file

ಬೆಂಗಳೂರು: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಹೊಸ ಸಿನಿಮಾ ‘ಜೆರ್ಸಿ‘ ಪೂರ್ತಿಯಾಗಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಏಪ್ರಿಲ್ 22ರಂದು ಬಿಡುಗಡೆಯಾಗಿದೆ.

ಆದರೆ, ಬಿಡುಗಡೆಯಾದ ಮೊದಲ ದಿನವೇ ಚಿತ್ರ ತಮಿಳುರಾಕರ್ಸ್, ಮೂವಿರೂಲ್ಸ್, ಟೆಲಿಗ್ರಾಂ ಮತ್ತು ಇತರ ಕೆಲವು ಟೊರೆಂಟ್ ಸೈಟ್‌ಗಳಲ್ಲಿ ಸೋರಿಕೆಯಾಗಿದೆ ಎಂದು ಡಿಎನ್‌ಎ ವರದಿ ಮಾಡಿದೆ.

ಆರಂಭದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿನಿಮಾ ಬಿಡುಗಡೆ ತಡವಾಗಿತ್ತು. ನಂತರದಲ್ಲಿ ಕೆಲವೊಂದು ಕಾನೂನು ಸಮಸ್ಯೆಗಳಿಂದಾಗಿ ಸಿನಿಮಾ ನಿಗದಿತ ದಿನಾಂಕದಂದು ತೆರೆಕಂಡಿರಲಿಲ್ಲ.

ಅರ್ಜುನ್ ತಲ್ವಾರ್ ಎಂಬ ಕ್ರಿಕೆಟರ್ ಪಾತ್ರದಲ್ಲಿ ಶಾಹಿದ್ ಕಪೂರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2, ಆರ್‌ಆರ್‌ಆರ್‌, ಅಟ್ಯಾಕ್ ಸಹಿತ ಹಲವು ಸಿನಿಮಾಗಳು ಟೊರೆಂಟ್ ಸೈಟ್‌ಗಳಲ್ಲಿ ಸೋರಿಕೆಯಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು