ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಳೇ ‘ಶಾಖಾಹಾರಿ’ಯ ಸೌಗಂಧಿಕ

Published 25 ಜನವರಿ 2024, 20:02 IST
Last Updated 25 ಜನವರಿ 2024, 20:02 IST
ಅಕ್ಷರ ಗಾತ್ರ

ವಿಭಿನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರನ್ನು ಸೆಳೆದಿರುವ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಾಖಾಹಾರಿ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಮಲೆನಾಡಿನ ಸೊಗಡಿನ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾಗೆ ಸಂದೀಪ್‌ ಸುಂಕದ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಸಂದೀಪ್ ‘ಶಾಖಾಹಾರಿ’ ಸಿನಿಮಾ ಮೂಲಕ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಸೌಗಂಧಿಕ’ ಎಂಬ ಮೆಲೋಡಿ ಹಾಡಿಗೆ ನಿರ್ದೇಶಕ‌ ಸಂದೀಪ್ ಸಾಹಿತ್ಯ ಬರೆದಿದ್ದು, ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಮಯೂರ್‌ ಅಂಬೆಕಲ್ಲು ಸಂಗೀತದ ಇಂಪು ಹಾಡಿಗಿದೆ. ಯುವ ಪ್ರೇಮಿಗಳ ನಡುವಿನ ಈ ಹಾಡಿನಲ್ಲಿ ವಿನಯ್ ಯು.ಜೆ. ಹಾಗೂ ನಿಧಿ ಹೆಗಡೆ ನಟಿಸಿದ್ದಾರೆ. 

ಸಿನಿಮಾದಲ್ಲಿ ಬಾಣಸಿಗನ ಪಾತ್ರದಲ್ಲಿ ರಂಗಾಯಣ ರಘು, ಪೊಲೀಸ್‌ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ ಮತ್ತಿತರರು ತಾರಾಬಳಗದಲ್ಲಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ವಿಶ್ವಜಿತ್ ರಾವ್ ಛಾಯಾಚಿತ್ರಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಸಿನಿಮಾಗಿದೆ. ಮಲೆನಾಡಿನಲ್ಲೇ ಇಡೀ ಸಿನಿಮಾದ ಚಿತ್ರೀಕರಣ ನಡೆದಿದ್ದು, ಇಲ್ಲಿನವರೇ ಈ ಸಿನಿಮಾಗೆ ಕೆಲಸ ಮಾಡಿರುವುದು ವಿಶೇಷ. ಈಗಾಗಲೇ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದೆ. ಫೆಬ್ರುವರಿ ತಿಂಗಳಲ್ಲಿ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ ಕೆಲಸ ಆರಂಭಿಸಿದೆ. ಈ ಸಿನಿಮಾವನ್ನು ಕೆ.ಆರ್.ಜಿ ಸ್ಟುಡಿಯೋಸ್‌ ವಿತರಣೆ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT