ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಶಂಕರ್‌ ನಾಗ್‌ ಜನ್ಮದಿನ: ನೆಚ್ಚಿನ ನಟನಿಗೆ ನುಡಿನಮನ

Last Updated 9 ನವೆಂಬರ್ 2021, 7:23 IST
ಅಕ್ಷರ ಗಾತ್ರ

ಬೆಂಗಳೂರು: ‘ಶಂಕರನಿಗೆ ಅಷ್ಟೇ ಆಯುಷ್ಯವನ್ನು ಭಗವಂತ ಕಲ್ಪಿಸಿದ್ದ. ಆದರೆ ಜನರಿಂದ ಆತನಿಗೆ ಸಿಕ್ಕ ಪ್ರೀತಿ, ಅಭಿಮಾನವನ್ನು ನೀವು ಇಂದೂ ನೋಡುತ್ತಿದ್ದೀರಿ...’

ಇದು ಇತ್ತೀಚೆಗೆ ಪ್ರಜಾವಾಣಿ ಸೆಲೆಬ್ರಿಟಿ ಲೈವ್‌ನಲ್ಲಿ ನಟ ಅನಂತನಾಗ್‌ ಅವರು ಶಂಕರ್‌ನಾಗ್‌ ಅವರನ್ನು ನೆನೆದ ಪರಿ. ಇದು ಅಕ್ಷರಶಃ ಸತ್ಯ. ಮಂಗಳವಾರ(ನ.9)ದಿವಂಗತ ನಟ ಶಂಕರ್‌ನಾಗ್‌ ಅವರ ಜನ್ಮದಿನ. ಈ ಸಂದರ್ಭದಲ್ಲಿ ಚಿತ್ರರಂಗದ ಪ್ರಮುಖರು ಸೇರಿದಂತೆ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಹೊನ್ನಾವರದಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದು ರಂಗಭೂಮಿಯ ಮುಖಾಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಶಂಕರ್‌ನಾಗ್‌. ಗಿರೀಶ ಕಾರ್ನಾಡ ಅವರ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟಾಗ ಶಂಕರ್‌ ಅವರಿಗೆ ಇನ್ನೂ ಇಪ್ಪತ್ನಾಲ್ಕು ವಯಸ್ಸು. ಈ ಸಿನಿಮಾ ರಜತ ಮಯೂರ ರಾಷ್ಟ್ರಪ್ರಶಸ್ತಿ ಗೆದ್ದಿತ್ತು. ನಟನೆಯ ಜೊತೆಗೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದ ಶಂಕರ್‌ನಾಗ್‌, 27ರ ವಯಸ್ಸಿನಲ್ಲಿ ‘ಮಿಂಚಿನಓಟ’ದಂಥ ಸಿನಿಮಾ ನಿರ್ದೇಶಿಸಿದರು.

ಅದಾದ ಮೇಲೆ ‘ಜನ್ಮ ಜನ್ಮದ ಅನುಬಂಧ’, ‘ಗೀತಾ’ದಂಥ ಸಿನಿಮಾಗಳನ್ನು ನಿರ್ದೇಶಿಸಿದರು.1980ರಲ್ಲಿ ಎಂಟು, 81ರಲ್ಲಿ ಎಂಟು, 83ರಲ್ಲಿ ಒಂಬತ್ತು, 84ರಲ್ಲಿ 14, 87ರಲ್ಲಿ ಏಳು, 89ರಲ್ಲಿ ಎಂಟು ಸಿನಿಮಾಗಳಲ್ಲಿ ಶಂಕರ್‌ನಾಗ್ ಅಭಿನಯಿಸಿದ್ದರು. ನೆಚ್ಚಿನ ‘ಆಟೊರಾಜ’, ‘ಸಾಂಗ್ಲಿಯಾನ’ನನ್ನು ನೆನೆದು ಆಟೊ ಚಾಲಕರೂ ರಾಜ್ಯದೆಲ್ಲೆಡೆ ಜನ್ಮದಿನ ಆಚರಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ದೂರದೃಷ್ಟಿ ಹೊಂದಿದ್ದ ನಟ ಶಂಕರ್‌ನಾಗ್‌ 1990ರ ಸೆ.30ರಂದು ದಾವಣಗೆರೆ ಹತ್ತಿರದ ಆನಗೋಡಿನ ಬಳಿ ಶಂಕರ್‌ನಾಗ್‌ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT