ಸೋಮವಾರ, ಸೆಪ್ಟೆಂಬರ್ 20, 2021
30 °C

ರಾಜ್ ಕುಂದ್ರಾ ಜೊತೆಗಿನ ಹಳೆಯ ಚಿತ್ರ ಪೋಸ್ಟ್ ಮಾಡಿದ ಶೆರ್ಲಿನ್ ಚೋಪ್ರಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಅಶ್ಲೀಲ ಚಿತ್ರಗಳನ್ನು ತಯಾರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಲೇ ಬಂದಿರುವ ನಟಿ ಶೆರ್ಲಿನ್ ಚೋಪ್ರಾ, ಈಗ ಹಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. 

ರಾಜ್ ಕುಂದ್ರಾ ಜೊತೆಗಿನ ಚಿತ್ರ ಹಂಚಿರುವ ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಫೋಟೊ ತೆಗೆದ ದಿನಾಂಕವವನ್ನು ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: 

ಈ ಕುರಿತು ಟ್ವೀಟ್ ಮಾಡಿರುವ ಶೆರ್ಲಿನ್, 'ಈ ದಿನ 2019 ಮಾರ್ಚ್ 29 ಆಗಿತ್ತು. 'ಆರ್ಮ್ಸ್‌ಪ್ರೈಮ್' ಆಯೋಜಿಸಿದ 'ದಿ ಶೆರ್ಲಿನ್ ಚೋಪ್ರಾ' ಆ್ಯಪ್‌ನ ಮೊದಲ ಕಂಟೆಂಟ್ ಶೂಟ್ ನಡೆಯುತ್ತಿತ್ತು. ನಾನು ಅಲ್ಲಿಯವರೆಗೆ ಯಾವುದೇ ಆ್ಯಪ್‌ನೊಂದಿಗೆ ಸಂಯೋಜನೆ ಮಾಡಿರಲಿಲ್ಲ. ಹಾಗಾಗಿ ನನ್ನ ಪಾಲಿಗೆ ಹೊಸ ಅನುಭವವಾಗಿತ್ತು. ಅಲ್ಲಿ ಭರವಸೆಯ ಹಾಗೂ ಉತ್ಸಾಹದ ವಾತಾವರಣ ಮನೆ ಮಾಡಿತ್ತು' ಎಂದಿದ್ದಾರೆ.

 

 

 

ಆ್ಯಪ್‌ಗಳಿಗಾಗಿ ಅಶ್ಲೀಲ ಚಿತ್ರಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದಂತೆ ಜುಲೈ 19ರಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಗಂಭೀರ ಆರೋಪಗಳನ್ನು ಮಾಡಿರುವ ಶೆರ್ಲಿನ್, ರಾಜ್ ಕುಂದ್ರಾ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.

 

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶೆರ್ಲಿನ್ ಚೋಪ್ರಾ ಮುಂಬೈ ಪೊಲೀಸರ ಎದುರು ಹಾಜರಾಗಿದ್ದರು. ಅಲ್ಲದೆ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ರಾಜ್ ಕುಂದ್ರಾ ದಿಕ್ಕು ತಪ್ಪಿಸುತ್ತಿದ್ದರು ಎಂದು ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು