ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಶಿಲ್ಪದ ಮುಂದೆ ಶಿಲ್ಪಾ ಯೋಗ!

Last Updated 22 ಜೂನ್ 2020, 5:42 IST
ಅಕ್ಷರ ಗಾತ್ರ

40 ಪ್ಲಸ್‌ ನಂತರವೂ ಬಳಕುವ ಬಳ್ಳಿಯಂತೆ ದೇಹಸಿರಿಯನ್ನು ಕಾಪಾಡಿಕೊಂಡಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಈ ಬಾರಿ ಅಪ್ಪಂದಿರ ದಿನ ಮತ್ತು ಅಂತರರಾಷ್ಟ್ರೀಯ ಯೋಗ ದಿನವನ್ನು ಒಟ್ಟಾಗಿ ಆಚರಿಸಿದ್ದಾರೆ.ಫಿಟ್ನೆಸ್‌ ಮೂಲಕ ಎಲ್ಲರ ಗಮನ ಸೆಳೆದಿರುವ ಕರಾವಳಿ ಬೆಡಗಿ ತಮ್ಮ ಕುಟುಂಬದ ಜತೆ ಯೋಗ ಮಾಡುವ ವಿಡಿಯೊ ಮತ್ತು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮನೆಯ ಗಾರ್ಡನ್‌ನಲ್ಲಿರುವ ಬುದ್ಧನ ಶಿಲ್ಪದ ಪ್ರತಿಮೆಯ ಮುಂದೆ ಪತಿ ರಾಜ್‌ ಕುಂದ್ರಾ ಮತ್ತು ಮಗ ವಿಯಾನ್‌ ಜತೆ ಧ್ಯಾನಸ್ಥ ಸ್ಥಿತಿಯಲ್ಲಿರುವ ಶಿಲ್ಪಾ ಅವರ ಯೋಗ, ಧ್ಯಾನ ಗಮನ ಸೆಳೆಯುತ್ತವೆ. ಇದೇ ಸಮಯದಲ್ಲಿ ಮಗ ವಿಯಾನ್‌ ಮತ್ತು ಮಗಳು ಸಮಿಶಾ ಪರವಾಗಿ ರಾಜ್‌ ಕುಂದ್ರಾ ಅವರಿಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾರೆ.

Asato Maa Sad-Gamaya | Tamaso Maa Jyotir-Gamaya | Mrityor Maa Amritam Gamaya | Om Shanti Shanti Shanti hi || Meaning: • Keep me not in the Phenomenal World of Unreality, but make me go towards the Reality of Eternal Self, • Keep me not in the Ignorant State of Darkness, but make me go towards the Light of Spiritual Knowledge, • Keep me not in the World of Mortality, but make me go towards the World of Immortality of Self-Realization, • Om, Peace, Peace, Peace. Wishing you all a very Happy International Yoga Day. Today I’ve shared a personal ritual with you all. I've been chanting the Shanti Mantra after every yoga session, because it helps me tell the Universe, our guiding force in nature... that I surrender to the will of nature. I accept that I don't know it all and I want to be drawn towards a better existence. I understand how limited my knowledge is of my own being and ask to be connected to all elements of nature in the way that humans were meant to be. Today, I pledge to work on bettering myself every day, so I can be of service to all in this lifetime, how I was intended to be. When this acceptance comes from within, you start realizing the deeper meaning of life. Shared the mantra here along with its meaning. Hoping we can all adopt and follow it as a way of life. With Gratitude Shilpa Shetty Kundra . . #InternationalYogaDay #SwasthRahoMastRaho #YogaSeHiHoga #YogisOfInstagram #StayHealthyStayHappy #WorkoutAtHome #YogaAtHome

Shilpa Shetty Kundra (@theshilpashetty) ರಿಂದ ಹಂಚಲಾದ ಪೋಸ್ಟ್ ಅವರು ರಂದು

‘ಇಂದು ವಿಶೇಷ ದಿನ. ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಪ್ಪಂದಿರ ದಿನ ಒಟ್ಟಿಗೆ ಬಂದಿವೆ. ಒಟ್ಟಿಗೆ ಪ್ರಾರ್ಥಿಸುವ, ಒಟ್ಟಾಗಿ ಕುಳಿತು ಊಟ ಮಾಡುವ ಮತ್ತು ಯೋಗ ಮಾಡುವ ಕುಟುಂಬ ಒಟ್ಟಾಗಿ ಇರುತ್ತದೆ. ‘ಕುಟುಂಬ ಸದಸ್ಯರ ಜತೆ ಯೋಗ’ ಕಾರ್ಯಕ್ರಮದಿಂದ ಅಪ್ಪ ಮತ್ತು ಮಕ್ಕಳು ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುವಂತಾಗಿದೆ’ ಎಂದು ಸಂತೋಷ ಹಂಚಿಕೊಂಡಿದ್ದಾರೆ.

‘ಎಲ್ಲ ಅಪ್ಪಂದಿರೂನಿಜವಾದ ಹೀರೊಗಳು. ನನ್ನ ಮಕ್ಕಳಿಗೆ ರಾಜ್‌ ಕುಂದ್ರಾ ಅವರಂತಹ ಒಳ್ಳೆಯ ಅಪ್ಪ ಸಿಕ್ಕಿದ್ದಾರೆ’ ಎಂದು ಅಡಿಬರಹ ಬರೆದ ಫೋಟೊ ಹಂಚಿಕೊಂಡಿದ್ದಾರೆ.ಯೋಗ ಮಾಡುವಾಗ ಮತ್ತು ನಂತರ ಪಠಿಸಿದ ಓಂ ಮತ್ತು ಶಾಂತಿ ಮಂತ್ರಗಳ ಮಹತ್ವವನ್ನು ಶಿಲ್ಪಾ ಶೆಟ್ಟಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT