‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ವಿಕ್ರಾಂತ್ ರೋಣ’ ಮುಂತಾದ ಹಿಟ್ ಸಿನಿಮಾಗಳ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ನಟನೆಯ ‘ಜಸ್ಟ್ ಮ್ಯಾರಿಡ್’ ಸಿನಿಮಾ ಮೂಲಕ ಅಜನೀಶ್ ನಿರ್ಮಾಪಕರಾಗಿದ್ದಾರೆ.

ಇತ್ತೀಚೆಗೆ ಈ ಸಿನಿಮಾದ ಹಾಡು ರಿಲೀಸ್ ಆಗಿದ್ದು, ಎಬಿಬಿಎಸ್ ಸ್ಟುಡಿಯೊಸ್ ಲಾಂಛನದಲ್ಲಿ ಅಜನೀಶ್ ಹಾಗೂ ಸಿ.ಆರ್. ಬಾಬಿ ನಿರ್ಮಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ‘ಇಬ್ಬನಿ ತಬ್ಬಿದ ಇಳೆಯಲಿ’, ‘ಅಬ ಜಬ ದಬ’ ಸಿನಿಮಾ ಬಳಿಕ ಅಂಕಿತಾ ಅವರ ಹೊಸ ಪ್ರಾಜೆಕ್ಟ್ ಇದಾಗಿದೆ. ಸಿ.ಆರ್. ಬಾಬಿ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಸಿ.ಆರ್. ಬಾಬಿ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೆಸರೇ ಹೇಳುವಂತೆ ‘ಜಸ್ಟ್ ಮ್ಯಾರಿಡ್’ ಪ್ರೇಮಕಥೆಯ ಚಿತ್ರ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಈ ತಿಂಗಳ ಕೊನೆಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದಿದೆ ಚಿತ್ರತಂಡ. ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ಸಾಕ್ಷಿ ಅಗರವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅಶಿಕ್ ಕುಸುಗೊಳ್ಳಿ ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಬಾಬಾ ಭಾಸ್ಕರ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.