ಭಾನುವಾರ, ಫೆಬ್ರವರಿ 23, 2020
19 °C

ಶಿವರಾತ್ರಿಗೆ ‘ಶಿವ’ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಘುವಿಜಯ ಕಸ್ತೂರಿ ನಿರ್ದೇಶನದ ‘ಶಿವ’ ಚಿತ್ರವು ಫೆಬ್ರುವರಿ 21ರ ಶಿವರಾತ್ರಿ ಸಂಭ್ರಮದ ಹೊತ್ತಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ಇದರಲ್ಲಿ ಹಳ್ಳಿಯಲ್ಲಿ ನಡೆಯುವ ಪ್ರೇಮಕಥೆ ಇದೆ. ಹಾಗೆಯೇ, ಸ್ಥಳೀಯ ರೌಡಿಸಂ ಕುರಿತ ಕಥೆಯೂ ಇದರಲ್ಲಿದೆ’ ಎಂದು ಹೇಳುತ್ತಾರೆ ರಘುವಿಜಯ. ಅವರು ಈ ಚಿತ್ರದ ನಾಯಕ ನಟ ಕೂಡ ಹೌದು.

ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು, ಯಾವ ಮುಜುಗರವೂ ಇಲ್ಲದೆ ವೀಕ್ಷಿಸಬಹುದಾದ ಚಿತ್ರ ಇದು. ಎಲ್ಲ ವರ್ಗಗಳ ಜನರಿಗೂ ಈ ಸಿನಿಮಾ ಇಷ್ಟವಾಗುತ್ತದೆ. ಮಂಡ್ಯ ಸೊಗಡಿನ ಕನ್ನಡ ಇದರಲ್ಲಿ ಬಳಕೆಯಾಗಿದೆ ಎಂಬ ವಿವರಣೆಯನ್ನೂ ಅವರು ನೀಡುತ್ತಾರೆ.

ಧರಣಿ ಅವರು ಈ ಚಿತ್ರದ ನಾಯಕಿ. ‘ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಶುದ್ಧ ಪ್ರೀತಿಯ ಕಥೆಯೊಂದು ಈ ಚಿತ್ರದಲ್ಲಿ ಇದೆ. ನಾನು ಹೋಮ್ಲಿ ಆಗಿರುವ ಶಿಕ್ಷಕಿಯ ಪಾತ್ರ ನಿಭಾಯಿಸಿದ್ದೇನೆ’ ಎಂದು ಅವರು ತಮ್ಮ ಪಾತ್ರದ ಕುರಿತು ವಿವರಣೆ ನೀಡಿದರು. ಚಿತ್ರದ ನಿರ್ಮಾಣದ ಹೊಣೆಯನ್ನೂ ರಘುವಿಜಯ ಅವರೇ ಹೊತ್ತುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು