ಮಂಗಳವಾರ, ಆಗಸ್ಟ್ 3, 2021
28 °C
ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಣೆ

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ಗೆ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರಿಗೆ ಸೋಮವಾರ (ಜುಲೈ 12) 59ನೇ ಜನ್ಮದಿನದ ಸಂಭ್ರಮ. ಕೋವಿಡ್‌ ಕಾರಣದಿಂದಾಗಿ ಕೇವಲ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಸರಳವಾಗಿ ಜನ್ಮದಿನಾಚರಣೆಯನ್ನು ಶಿವರಾಜ್‌ಕುಮಾರ್‌ ಆಚರಿಸಿದ್ದಾರೆ.

‘ನನ್ನ ಜನ್ಮದಿನಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಜುಲೈ 12 ನನ್ನ ಜನ್ಮದಿನ. ಇದು ಎಲ್ಲರಿಗೂ ತಿಳಿದಿದೆ. ನಿಮ್ಮ ಶುಭಹಾರೈಕೆಯನ್ನು ಸಾಮಾಜಿಕ ಜಾಲತಾಣಗಳ ಮುಖಾಂತರವೇ ತಿಳಿಸಿ’ ಎಂದು ಕೆಲ ದಿನಗಳ ಹಿಂದಷ್ಟೇ ಶಿವರಾಜ್‌ಕುಮಾರ್‌ ವಿಡಿಯೊ ಸಂದೇಶದ ಮುಖಾಂತರ ತಿಳಿಸಿದ್ದರು.

ಅದರಂತೇ ಸಾವಿರಾರು ಅಭಿಮಾನಿಗಳು ಹಾಗೂ ಪ್ರಮುಖ ಕಲಾವಿದರೆಲ್ಲರೂ ಸಾಮಾಜಿಕ ಜಾಲತಾಣದ ಮುಖಾಂತರವೇ ಶಿವರಾಜ್‌ಕುಮಾರ್‌ ಅವರಿಗೆ ಶುಭ ಹಾರೈಸಿದ್ದಾರೆ. ‘ಶಿವಣ್ಣ, ನಿಮಗೆ ಸುಖಸಂತೋಷ ಹಾಗೂ ಆರೋಗ್ಯವನ್ನು ಕೋರುತ್ತೇನೆ. ಈ ವರ್ಷ ನಿಮಗೆ ಅದ್ಭುತವಾಗಿರಲಿ’ ಎಂದು ನಟ ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ‘ನಮ್ಮೆಲ್ಲರ ಹೆಮ್ಮೆಯ, ಚಿರಯುವಕ ಮತ್ತು  ಎನರ್ಜೆಟಿಕ್‌ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು’ ಎಂದು ನಟ ಶರಣ್‌ ಅವರು ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.

ಶಿವರಾಜ್‌ಕುಮಾರ್‌ ಅವರ ಜನ್ಮದಿನದ ಸಂದರ್ಭದಲ್ಲೇ ಎ.ಹರ್ಷ ನಿರ್ದೇಶನದ ‘ಭಜರಂಗಿ–2’ ಚಿತ್ರತಂಡವು ಚಿತ್ರ ವಿಶೇಷ ಟೀಸರ್‌ ಬಿಡುಗಡೆಗೊಳಿಸಿ, ಕರುನಾಡ ಚಕ್ರವರ್ತಿಗೆ ಶುಭಕೋರಿದೆ. ಸೋಮವಾರವೇ ಶಿವರಾಜ್‌ಕುಮಾರ್‌ ನಟನೆಯ 123ನೇ ಸಿನಿಮಾದ ಶೀರ್ಷಿಕೆ ಅನಾವರಣವೂ ನಡೆಯಲಿದೆ. ಎಸ್‌.ಡಿ.ವಿಜಯ್‌ ಮಿಲ್ಟನ್‌ ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ್‌ ಅವರೂ ನಟಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು