ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಭೀತಿ | ನಡುವೆ ಅಂತರವಿರಲಿ ಎಂದ ಶ್ರದ್ಧಾ ಶ್ರೀನಾಥ್‌

Last Updated 21 ಮಾರ್ಚ್ 2020, 3:06 IST
ಅಕ್ಷರ ಗಾತ್ರ

‘ಕೊರೊನಾ ಹತ್ತಿರ ಸುಳಿಯಬಾರದೆಂದರೆಜನರು ಮತ್ತು ನನ್ನ ಅಭಿಮಾನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಇಲಾಖೆ ನೀಡುತ್ತಿರುವ ಮಾರ್ಗದರ್ಶನ ಪಾಲಿಸುವ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎನ್ನುತ್ತಾರೆ ನಟಿ ಶ್ರದ್ಧಾ ಶ್ರೀನಾಥ್‌.

‘ನಿಮ್ಮ ಅಭಿಮಾನಿಗಳಿಗೆ ಏನಾದರೂ ಹೇಳುವುದು ಇದೆಯಾ’ ಎಂದು ‘ಪ್ರಜಾಪ್ಲಸ್‌’ ಕೇಳಿದಾಗ, ‘ಖಂಡಿತ ಇದೆ, ಕೊರೊನಾ ಎಲ್ಲೆಡೆ ಆತಂಕ ಮೂಡಿಸಿರುವಾಗ ಈ ಹೊತ್ತಿನಲ್ಲಿ ನಾನು ಹೇಳುವುದು ತುಂಬಾನೇ ಇದೆ.ತುಂಬಾ ಜನ ಕೊರೊನಾ ನಮಗೆ ಬರುವುದಿಲ್ಲ, ಒಂದು ವೇಳೆ ಬಂದರೂ ಹೋಗುತ್ತದೆ ಎನ್ನುವ ತಾತ್ಸಾರ ಭಾವನೆಯಲ್ಲಿದ್ದಾರೆ. ರಾತ್ರಿ ಹತ್ತರ ನಂತರ ಯಾರೂ ಹೊರಗೆ ಬರಬೇಡಿ, ಕೊರೊನಾ ಸೋಂಕು ಸಾಯಿಸಲು ಸ್ಪ್ರೇ ಮಾಡುತ್ತಿರುತ್ತಾರೆ ಎನ್ನುವಮಾಹಿತಿ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡಿತು. ಆ ಸುದ್ದಿಯ ಮೂಲ ಪರಿಶೀಲಿಸದೆ, ಫ್ಯಾಕ್ಟ್ ಚೆಕ್‌ ಮಾಡದೆ ಅದನ್ನು ಫಾರ್ವರ್ಡ್‌ ಮಾಡುತ್ತಾರೆ.

ತಂತ್ರಜ್ಞಾನ ಮುಂದುವರಿದಂತೆ ಅದರಿಂದ ಎಷ್ಟುಲಾಭ ಆಗುತ್ತಿದೆಯೋ ಅಷ್ಟೇ ಅಪಾಯವೂ ಆಗುತ್ತಿದೆ. ಹಾಗಾಗಿ ನಾನು ಎಲ್ಲರಿಗೂ ಹೇಳುವುದು ಸರ್ಕಾರ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ಟ್ವಿಟರ್‌ ಖಾತೆಗಳನ್ನು ಅನುಸರಿಸಿ, ಇಂತಹ ಅಧಿಕೃತ ಸಂಸ್ಥೆಗಳು ನೀಡುವ ಗೈಡ್‌ಲೈನ್‌ ಮತ್ತು ಮಾಹಿತಿಗಳತ್ತ ಗಮನ ಕೊಡಿ’ ಎನ್ನುವ ಸಲಹೆ ನೀಡಿದರು.

‘ನಾನು ಎಲ್ಲೂ ಹೋಗದೆ ಈಸಮಯದಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದೇನೆ. ಶೂಟಿಂಗ್‌ಗೆ ಕರೆದರೂ ಹೋಗುವುದಿಲ್ಲ. ಕಳೆದ ವಾರ ವಿಮಾನದಲ್ಲಿ ಹೈದರಾಬಾದ್‌ ಮತ್ತು ಚೆನ್ನೈಗೆ ಪ್ರಯಾಣ ಮಾಡಿದ್ದೆ. ನನ್ನ ಕಸೀನ್‌ ಹೇಳಿದ ಮೇಲೆ ಗೊತ್ತಾಯಿತುಅದು ತಪ್ಪು, ನಾನು ಪ್ರಯಾಣ ಮಾಡಬಾರದಿತ್ತೆಂದು. ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜನರು ಸೇರುವೆಡೆಅಲ್ಲಿ ಯಾರಾದರೂ ಸೋಂಕಿತರು ಇದ್ದರೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯೋ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದು ನಾವು ರೋಗ ಕೊಂಡೊಯ್ಯುವ ಸಾಧ್ಯತೆ ಇರುತ್ತದೆ. ನಮ್ಮ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳು ಈ ಸಮಸ್ಯೆ ನಿರ್ವಹಿಸಲು ಸಮರ್ಥವಾಗಿದ್ದರೂ ಅನಾವಶ್ಯಕವಾಗಿ ನಾವು ಆರೋಗ್ಯ ಸೇವಾ ವ್ಯವಸ್ಥೆಯ ಮೇಲೆ ಒತ್ತಡ ಉಂಟು ಮಾಡಬಾರದು. ಜನರು ಸ್ವಯಂ ನಿರ್ಬಂಧ ವಿಧಿಸಿಕೊಳ್ಳಬೇಕು’ ಎಂದರು.

‘ಲ್ಯಾಪ್‌ಟಾಪ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ಇರುವಾಗ ಸಾಧ್ಯವಾದಷ್ಟು ಕೆಲಸಗಳನ್ನು ‘ವರ್ಕ್‌ ಫ್ರಮ್‌ ಹೋಮ್‌’ ಮೂಲಕ ನಿಭಾಯಿಸಬೇಕು. ಇಂದು ಶೇಕಡ 80ರಷ್ಟು ಕೆಲಸಗಳನ್ನು‘ವರ್ಕ್‌ ಫ್ರಮ್‌ ಹೋಮ್‌’ನಿಂದಲೇ ನಿಭಾಯಿಸಲು ಸಾಧ್ಯ. ಇಡೀ ವಿಶ್ವವನ್ನು ಕಂಗೆಡಿಸುತ್ತಿರುವ ಕೊರೊನಾ ಮಾರಿ ವಿರುದ್ಧ ನಾವು ಗೆಲ್ಲಬೇಕಾದರೆ ಜನರು ಮುನ್ನೆಚ್ಚರಿಕೆ ವಹಿಸಲೇಬೇಕು’ ಎಂದರು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT