ಭಾನುವಾರ, ಆಗಸ್ಟ್ 1, 2021
23 °C

ಹಾಟ್‌ ಫೋಟೊ ಹಂಚಿಕೊಂಡ ‘ಯು ಟರ್ನ್’‌ ಬೆಡಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ‘ಯೂ ಟರ್ನ್‌’ ಚಿತ್ರದ ಮೂಲಕ ವೃತ್ತಿಬದುಕು ಆರಂಭಿಸಿದ ನಟಿ ಶ್ರದ್ಧಾ ಶ್ರೀನಾಥ್‌ ಈಗ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಆಕೆ ನಟಿಸಿರುವ ನೀನಾಸಂ ಸತೀಶ್‌ ನಾಯಕರಾಗಿರುವ ‘ಗೋದ್ರಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸುದೀಪ್‌ ನಟನೆಯ ‘ಫ್ಯಾಂಟಮ್‌’ ಚಿತ್ರಕ್ಕೂ ಅವರೇ ನಾಯಕಿ ಎಂಬ ಸುದ್ದಿಯಿದೆ. ಆದರೆ, ಇದು ಇನ್ನೂ ಅಧಿಕೃತಗೊಂಡಿಲ್ಲ. ಕನ್ನಡದಲ್ಲಿ ಆಕೆ ಮತ್ತೊಂದು ಚಿತ್ರ ‘ರುದ್ರಪ್ರಯಾಗ’ದಲ್ಲೂ ನಟಿಸುತ್ತಿದ್ದಾರೆ.


ನಟಿ ಶ್ರದ್ಧಾ ಶ್ರೀನಾಥ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊ

ತಮಿಳಿನಲ್ಲಿ ವಿಶಾಲ್‌ ನಟನೆಯ ‘ಚಕ್ರ’ ಚಿತ್ರಕ್ಕೂ ಅವರೇ ನಾಯಕಿ. ಸೈಬರ್‌ ಕ್ರೈಮ್‌ ಸುತ್ತ ಹೆಣೆದ ಥ್ರಿಲ್ಲರ್‌ ಕಥೆ ಇದು. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಇದರಲ್ಲಿ ಶ್ರದ್ಧಾ ಅವರದ್ದು ತನಿಖಾಧಿಕಾರಿಯ ಪಾತ್ರ. 

ತನ್ನ ಸೌಂದರ್ಯ ಹಾಗೂ ಪ್ರತಿಭೆಯಿಂದಲೇ ಆಕೆ ಸಿನಿಮಾಗಳಲ್ಲಿ ನಟನೆಯ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊವೊಂದು ವೈರಲ್‌ ಆಗಿದೆ. ಎರಡು ವರ್ಷದ ಹಿಂದೆ ತೆಗೆದಿರುವ ಈ ಫೋಟೊದಲ್ಲಿ ಆಕೆ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದು ಒಳಾಂಗಣ ಫೋಟೊಶೂಟ್‌ ಆಗಿದ್ದು, ಆಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಕಷ್ಟು ಮಂದಿ ತರೇಹವಾರಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ನಟಿ ಆಶಿಕಾ ರಂಗನಾಥ್,‌ ‘ಹಾಟ್‌ ಆಗಿರುವ ಫೋಟೊ’ ಎಂದು ಪ್ರತಿಕ್ರಿಯಿಸಿದ್ದಾರೆ.

ಶ್ರದ್ಧಾ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೊ ಮಾತ್ರ ಹಂಚಿಕೊಂಡಿದ್ದು ಮತ್ತಷ್ಟು ಫೋಟೊಗಳನ್ನು ಹಂಚಿಕೊಳ್ಳುತ್ತಾರೆಯೇ ಎಂಬ ಕುತೂಹಲ ಆಕೆಯ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು