ಶನಿವಾರ, ಜನವರಿ 16, 2021
28 °C

ಶೂಟಿಂಗ್‌ ಸೆಟ್‌ನಿಂದ ಶ್ರುತಿ ಹೊರನಡೆದದ್ದು ಯಾಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Shruthi Hassan

ಲಾಭಂ ಶೂಟಿಂಗ್‌ ಸ್ಥಳದಿಂದ ನಟಿ ಶ್ರುತಿ ಹಾಸನ್‌ ದಿಢೀರನೆ ಹೊರ ಹೋಗಿದ್ದಾರೆ. ಆಂಧ್ರ ಪ್ರದೇಶದ ಧರ್ಮಪುರಿ ಮತ್ತು ಕೃಷ್ಣಗಿರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್‌ ನಡೆಯುತ್ತಿತ್ತು. ಅಂತೆಯೇ ಇದೂ ಕ್ಲೈಮಾಕ್ಸ್‌ ಹಂತದ ಚಿತ್ರೀಕರಣವೂ ಆಗಿತ್ತು. ವಿಜಯ್‌ ಸೇತುಪತಿ ಮತ್ತು ಶ್ರುತಿ ಹಾಸನ್‌ ಅವರನ್ನೊಳಗೊಂಡ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು ಎಂದು ಚಿತ್ರತಂಡದ ಮೂಲಗಳು ಹೇಳಿವೆ.

ಇಷ್ಟಕ್ಕೂ ಆಕೆ ಹೊರ ನಡೆದದ್ದು ಯಾಕೆ ಗೊತ್ತಾ?

ಶೂಟಿಂಗ್‌ ನಡೆಯುತ್ತಿರುವುದು ಮತ್ತು ಅದರಲ್ಲಿ ತಾನು ಮತ್ತು ವಿಜಯ್‌ ಸೇತುಪತಿ ಭಾಗವಹಿಸುತ್ತಿರುವುದು ಗೊತ್ತಾದ ತಕ್ಷಣ ಸುತ್ತಮುತ್ತಲಿನ ಹಳ್ಳಿಗಳ ಜನ ಭಾರೀ ಸಂಖ್ಯೆಯಲ್ಲಿ ಇವರನ್ನು ನೋಡಲೆಂದು ಬಂದು ಗುಂಪು ಸೇರಿದರಂತೆ. ಇದನ್ನು ನೋಡಿದ ಶ್ರುತಿ ಸೆಟ್‌ನಿಂದ ಹೊರನಡೆದೇಬಿಟ್ಟರು. 

ತಮ್ಮ ನಿರ್ಗಮನದ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡ ಶ್ರುತಿ,‘ಕೋವಿಡ್‌–19 ಸಾಂಕ್ರಾಮಿಕದಿಂದ ನಾವಿನ್ನೂ ಹೊರಬಂದಿಲ್ಲ. ಅದೊಂದು ದೊಡ್ಡ ಆರೋಗ್ಯದ ರಿಸ್ಕ್‌. ಕೋವಿಡ್‌ ಮಾರ್ಗಸೂಚಿ ಪಾಲಿಸದಿದ್ದರೆ  ನನ್ನ ಸುರಕ್ಷತೆಗೆ ಕಾಳಜಿ ವಹಿಸಲು ಆದ್ಯತೆ ನೀಡುವ ಹಕ್ಕು ನನಗಿದೆ.ʼ ಎಂದು ಹೇಳಿಕೊಂಡಿದ್ದಾರೆ.   

ಈ ಚಿತ್ರವನ್ನು ಎಸ್‌.ಪಿ. ಜನನಾಥನ್‌ ನಿರ್ದೇಶಿಸುತ್ತಿದ್ದಾರೆ. 

ಇದೇ ವೇಳೆ ಶ್ರುತಿ ಅವರು ರವಿತೇಜ ಅವರ ಜತೆ ಕ್ರಾಕ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲ ವೇಣು ಶ್ರೀರಾಂ ನಿರ್ದೇಶನದಲ್ಲಿ ಪವನ್‌ ಕಲ್ಯಾಣ್‌ ಅವರ ಜತೆ ವಕೀಲ್‌ ಸಾಬ್‌ (ಹಿಂದಿಯ ಪಿಂಕ್‌ ಚಿತ್ರದ ರಿಮೇಕ್‌) ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು