ಬುಧವಾರ, ಅಕ್ಟೋಬರ್ 21, 2020
23 °C

ತಾಯಿಯಾದ ಬಳಿಕ ನಟನೆಗೆ ಮರಳುತ್ತಿರುವ ಶ್ರುತಿ ಹರಿಹರನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಶ್ರುತಿ ಹರಿಹರನ್‌ ‘ಆದ್ಯ’ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಆ ನಂತರ ಗರ್ಭಾವಸ್ಥೆ, ತಾಯ್ತನ ಎಂದು ಕೆಲವು ದಿನಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಕೆಲ ದಿನಗಳಿಂದ ಮಗಳು ಜಾನಕಿ ಜೊತೆ ಸಮಯ ಕಳೆಯುತ್ತಿರುವ ಶ್ರುತಿ ಮತ್ತೆ ಸಿನಿಮಾಕ್ಕೆ ಬರುವ ಯೋಚನೆ ಮಾಡಿದ್ದಾರೆ. 

ಸಿನಿಮಾಕ್ಕೆ ಮರಳಿರುವ ಶ್ರುತಿ ಡಾನ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಸದ್ಯದಲ್ಲೇ ಆರಂಭವಾಗಲಿದೆ. ನಟ ಸೂರ್ಯ ವಶಿಷ್ಠ ನಿರ್ದೇಶನದ ಸಿನಿಮಾದ ಮೂಲಕ ಶ್ರುತಿ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ ಸಿನಿಮಾದಲ್ಲಿ ಸೂರ್ಯ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾಕ್ಕೆ ಮರಳುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ ಶ್ರುತಿ.

ಸಿನಿಮಾದ ಬಗ್ಗೆ ಈ ಹಿಂದೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಸೂರ್ಯ ವಸಿಷ್ಠ ‘ನಾನು ಈ ಕತೆಯನ್ನು ಬಹಳ ದಿನಗಳ ಹಿಂದೆಯೇ ಬರೆದು ಇರಿಸಿಕೊಂಡಿದ್ದೆ. 2016ರಲ್ಲೇ ಸಿನಿಮಾ ಕತೆಯ ಬಗ್ಗೆ ಶ್ರುತಿ ಅವರಿಗೆ ತಿಳಿಸಿದ್ದೆ. ಅವರು ನಟಿಸಲು ಒಪ್ಪಿಕೊಂಡಿದ್ದರು. ಆದರೆ ದುರಾದೃಷ್ಟವತಾಶ್ ಆಗ ಸಿನಿಮಾ ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ಶ್ರುತಿ ಕೂಡ ಬೇರೆ ಸಿನಿಮಾ, ಮದುವೆ ಹಾಗೂ ತಾಯ್ತನದಲ್ಲಿ ಬ್ಯುಸಿಯಾಗಿದ್ದರು. ಈಗ ಅವರು ಮರಳಿ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಅವರದ್ದು ಮುಖ್ಯಪಾತ್ರ. ಅವರು ಮಾಯಾ ಎಂಬ ನೃತ್ಯಗಾರ್ತಿಯ ಪಾತ್ರ ಮಾಡುತ್ತಿದ್ದಾರೆ. ದೀಪಕ್ ಸುಬ್ರಹ್ಮಣ್ಯ, ಶ್ವೇತಾ ಗುಪ್ತಾ, ರವಿ ಭಟ್‌, ರಾಮ್ ಮಂಜುನಾಥ್, ಪ್ರಥ್ವಿ ಬನವಾಸಿ ಸೇರಿದಂತೆ ನಾನು ನಟಿಸುತ್ತಿದ್ದೇನೆ ಈ ಸಿನಿಮಾದಲ್ಲಿ ನಟಿಸುತ್ತೇವೆ’ ಎಂದಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು