ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಂತ್‌ ಚತುರ್ವೇದಿಗೆ ಮಾಳವಿಕಾ ನಾಯಕಿ

Last Updated 26 ಜೂನ್ 2020, 12:17 IST
ಅಕ್ಷರ ಗಾತ್ರ

ವಿಜಯ್‌ ದಳಪತಿ ಅಭಿನಯದ ತಮಿಳು ‘ಮಾಸ್ಟರ್‌’ ನಾಯಕಿ ಮಾಳವಿಕಾ ಮೋಹನನ್‌ತಮ್ಮ ಮುಂದಿನ ಬಾಲಿವುಡ್‌ ಚಿತ್ರದಲ್ಲಿ ‘ಗಲ್ಲಿ ಬಾಯ್‌’ ಸಿನಿಮಾ ಖ್ಯಾತಿಯ ಸಿದ್ಧಾಂತ್‌ ಚತುರ್ವೇದಿ ಜೊತೆ ರೊಮ್ಯಾನ್ಸ್‌‌ ಮಾಡಲಿದ್ದಾರೆ.

ಇನ್ನು ಹೆಸರಿಡದ ಈ ಹೊಸ ಸಿನಿಮಾವನ್ನು ಎಕ್ಸೆಲ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಗ್ಲಾಮರಸ್‌ ಪಾತ್ರದಲ್ಲಿ ಮಾಳವಿಕಾ ನಟಿಸಲಿದ್ದಾರೆ. ಈ ಚಿತ್ರಕ್ಕಾಗಿ ಸಿದ್ಧಾಂತ್‌ ಚತುರ್ವೇದಿ ಮಾರ್ಷಲ್‌ ಆರ್ಟ್‌ ಕಲಿಯುತ್ತಿದ್ದಾರೆ. ಮಾಳವಿಕಾ ಕೂಡ ಕೆಲ ಆ್ಯಕ್ಷನ್‌ ದೃಶ್ಯಗಳಲ್ಲಿ ನಟಿಸಲಿದ್ದಾರಂತೆ.

ಈ ಚಿತ್ರವು ಈ ವರ್ಷವೇ ಸೆಟ್ಟೇರಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್‌ ಕಾರಣದಿಂದ ಈ ವರ್ಷಾಂತ್ಯದಲ್ಲಿ ಅಥವಾ 2021ರ ಜನವರಿಯಲ್ಲಿ ಶೂಟಿಂಗ್‌ ಆರಂಭವಾಗಲಿದೆ. ಈ ಚಿತ್ರವನ್ನು ರವಿ ಉದ್ಯಾವರ್ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಬಹುತೇಕ ದೃಶ್ಯಗಳನ್ನು ವಿದೇಶಗಳಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿದೆಯಂತೆ.

ಮಾಳವಿಕಾ ಅವರಿಗೆ ಇದು ಎರಡನೇ ಬಾಲಿವುಡ್‌ ಚಿತ್ರ. ನಟ ಶಾಹಿದ್‌ ಕಪೂರ್‌ ಸಹೋದರ ಇಶಾನ್‌ ಖಟ್ಟರ್‌ ನಾಯಕನಾಗಿರುವ ‘ಬಿಯೊಂಡ್‌ ದ ಕ್ಲೌಡ್ಸ್‌’ ಚಿತ್ರದ ಮೂಲಕ ಮಾಳವಿಕಾ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದ್ದರು. ಇದರಲ್ಲಿ ಮುಂಬೈ ಧೋಬಿ ಘಾಟ್‌ ಪ್ರದೇಶದ ಯುವತಿ ಪಾತ್ರ ಮಾಡಿದ್ದರು.

ಮಾಳವಿಕಾ ಮೋಹನನ್‌ ಅವರು ಮಾಲಿವುಡ್‌, ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಪ್ರಖ್ಯಾತ ಸಿನಿಮಾಟೊಗ್ರಾಫರ್‌ ಕೆ.ಯು ಮೋಹನನ್‌ ಮಗಳು. ಆಕೆ ಕನ್ನಡದಲ್ಲಿ ‘ನಾನು ಮತ್ತು ವರಲಕ್ಷ್ಮಿ’ ಸೇರಿದಂತೆ ತಮಿಳು, ಹಿಂದಿ ಸೇರಿದಂತೆ ಐದಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಜಯ್‌ ದೇವರಕೊಂಡ ಅವರ ‘ಹೀರೋ’ ಸಿನಿಮಾಕ್ಕೂ ಮಾಳವಿಕಾನೇ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT