ಹಲವು ವರ್ಷಗಳ ಹಿಂದೆಯೇ ಮೃತರಾದ ನಟ-ನಟಿಯರ ಬಗ್ಗೆ ಮಾಹಿತಿಯನ್ನು ಹೊಂದಿರುವ ವಿಡಿಯೊವೊಂದು ಯೂಟ್ಯೂಬ್ನಲ್ಲಿ ಪ್ರಕಟವಾಗಿದೆ. ಅದರಲ್ಲಿ ಬಹುಭಾಷಾ ನಟ ಸಿದ್ದಾರ್ಥ್ ಹೆಸರು ಸಹ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಸತ್ತವರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಗಮನಿಸಿರುವ ಸಿದ್ದಾರ್ಥ್ ಅವರು ಯೂಟ್ಯೂಬ್ಗೆ ರಿಪೋರ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯೂಟ್ಯೂಬ್ 'ಕ್ಷಮಿಸಿ, ಈ ವಿಡಿಯೊದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ತೋರುತ್ತದೆ' ಎಂಬುದಾಗಿ ತಿಳಿಸಿದೆ.

ಈ ಬಗ್ಗೆ ಯುಟ್ಯೂಬ್ ವಿಡಿಯೊದ ಸ್ಕ್ರೀನ್ ಶಾಟ್ ಸಹಿತವಾಗಿ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ. 'ಅನೇಕ ವರ್ಷಗಳ ಹಿಂದೆಯೇ ನಾನು ಸತ್ತಿದ್ದೇನೆ ಎಂದು ಹೇಳಿಕೊಳ್ಳುವ ಈ ವಿಡಿಯೊದ ಬಗ್ಗೆ ಯೂಟ್ಯೂಬ್ಗೆ ರಿಪೋರ್ಟ್ ಮಾಡಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಯೂಟ್ಯೂಬ್, 'ಕ್ಷಮಿಸಿ, ಈ ವಿಡಿಯೊದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತೋರುತ್ತದೆ ಎಂಬುದಾಗಿ ತಿಳಿಸಿದೆ.' ಅದಕ್ಕೆ ನಾನು 'ಅಯ್ಯೋ ಪಾಪಿ' ಎಂದು ಅಚ್ಚರಿ ವ್ಯಕ್ತಪಡಿಸಿದೆ' ಎಂಬುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.