ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಮಾ 2020: ‘ಲವ್‌ ಮಾಕ್ಟೇಲ್‌’ ಅತ್ಯುತ್ತಮ ಕನ್ನಡ ಚಿತ್ರ

Last Updated 20 ಸೆಪ್ಟೆಂಬರ್ 2021, 16:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(ಸೈಮಾ) ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ನಡೆದಿದ್ದು, 2020ನೇ ಸಾಲಿನ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ನಟ ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ದೇಶಿಸಿರುವ ‘ಲವ್‌ ಮಾಕ್ಟೇಲ್‌’ ಚಿತ್ರವು ಪಡೆದಿದೆ.

ಪಾಪ್‌ಕಾರ್ನ್‌ ಮಂಕಿ ಟೈಗರ್‌ಚಿತ್ರದಲ್ಲಿನ ನಟನೆಗಾಗಿ ನಟ ‘ಡಾಲಿ’ ಧನಂಜಯ್‌ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಪ್ರತಿ ಹೆಜ್ಜೆಯಲ್ಲೂ ಶಕ್ತಿಯಾಗಿ ನಿಂತಿರುವ ನನ್ನ ಅಭಿಮಾನಿ ಬಳಗಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದಿದ್ದಾರೆ ಧನಂಜಯ್‌. ದಿಯಾಚಿತ್ರದಲ್ಲಿನ ನಟನೆಗಾಗಿ ಖುಷಿ ರವಿ ಅವರು ಅತ್ಯುತ್ತಮ ನಟಿ(ಕ್ರಿಟಿಕ್ಸ್‌) ಪ್ರಶಸ್ತಿ ಪಡೆದಿದ್ದಾರೆ. ಜಂಟಲ್‌ಮನ್‌ ಚಿತ್ರಕ್ಕಾಗಿಪ್ರಜ್ವಲ್‌ ದೇವರಾಜ್‌ ಅವರಿಗೆ ಅತ್ಯುತ್ತಮ ನಟ(ಕ್ರಿಟಿಕ್ಸ್‌) ಪ್ರಶಸ್ತಿ ದೊರೆತಿದೆ.

*

ಖುಷಿಗೆ ಪಾರವಿಲ್ಲ. ಇದು ಹೃದಯದಿಂದ ಬರೆದು, ನಿರ್ದೇಶಿಸಿ, ನಟಿಸಿದ ಚಿತ್ರ. ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದೆವು. ಚಿತ್ರದ ಎರಡನೇ ಭಾಗದ ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ಪೂರ್ಣಗೊಂಡಿದ್ದು ಒಂದೆರಡು ತಿಂಗಳಲ್ಲಿ ಬಿಡುಗಡೆಗೂ ಸಿದ್ಧವಾಗಲಿದೆ.
–ಡಾರ್ಲಿಂಗ್‌ ಕೃಷ್ಣ, ನಟ, ನಿರ್ದೇಶಕ

2020ನೇ ಸಾಲಿನ ಸೈಮಾ ಪ್ರಶಸ್ತಿ

ಅತ್ಯುತ್ತಮ ಪೋಷಕ ನಟ: ಬಿ.ಸುರೇಶ್‌(ಆ್ಯಕ್ಟ್‌ 1978)

ಅತ್ಯುತ್ತಮ ಪೋಷಕ ನಟಿ: ಅಮೃತ ಅಯ್ಯಂಗಾರ್‌(ಲವ್‌ ಮಾಕ್ಟೇಲ್‌)

ಅತ್ಯುತ್ತಮ ಹಾಸ್ಯ ನಟ: ರಂಗಾಯಣ ರಘು(ಫ್ರೆಂಚ್‌ ಬಿರಿಯಾನಿ)

ಅತ್ಯುತ್ತಮ ನಟ(ಚೊಚ್ಚಲ ಸಿನಿಮಾ): ಪೃಥ್ವಿ ಅಂಬರ್‌(ದಿಯಾ)

ಅತ್ಯುತ್ತಮ ನಟಿ(ಚೊಚ್ಚಲ ಸಿನಿಮಾ): ಸಪ್ತಮಿ ಗೌಡ(ಪಾಪ್‌ಕಾರ್ನ್‌ ಮಂಕಿ ಟೈಗರ್‌)

ಅತ್ಯುತ್ತಮ ಹಿನ್ನೆಲೆ ಗಾಯಕ: ಸಂಜಿತ್‌ ಹೆಗ್ಡೆ(ಚಿತ್ರ: ಜೆಂಟಲ್‌ಮೆನ್‌– ಹಾಡು: ಮರಳಿ ಮನಸಾಗಿದೆ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಧಿತಿ ಸಾಗರ್‌(ಚಿತ್ರ: ಫ್ರೆಂಚ್‌ ಬಿರಿಯಾನಿ– ಹಾಡು: ದಿ ಬೆಂಗಳೂರು)

ಅತ್ಯುತ್ತಮ ಛಾಯಾಗ್ರಹಣ: ವಿಶಾಲ್‌ ವಿಟ್ಟಲ್‌ ಹಾಗೂ ಸೌರಭ್‌ ವಾಗ್ಮರೆ(ದಿಯಾ)

ಅತ್ಯುತ್ತಮ ಸಾಹಿತ್ಯ: ಧನಂಜಯ್‌ ರಂಜನ್‌(ಸೋಲ್‌ ಆಫ್‌ ದಿಯಾ; ಚಿತ್ರ–ದಿಯಾ)

ಅತ್ಯುತ್ತಮ ನಿರ್ದೇಶಕ(ಚೊಚ್ಚಲ ಸಿನಿಮಾ): ರಾಧಾಕೃಷ್ಣ ರೆಡ್ಡಿ(ಮಾಯಾಬಜಾರ್‌ 2016)

ಅತ್ಯುತ್ತಮ ನಿರ್ಮಾಪಕ(ಚೊಚ್ಚಲ ಚಿತ್ರ): ಅಂಜನಾದ್ರಿ ಸಿನಿ ಕ್ರಿಯೇಷನ್ಸ್‌(ಶಿವಾಜಿ ಸುರತ್ಕಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT