ಶುಕ್ರವಾರ, ಮೇ 27, 2022
22 °C

ವಿಡಿಯೊ: ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳಿಗೆ ಹೊಡೆಯಲು ಮುಂದಾದ ಗಾಯಕಿ ಮಂಗ್ಲಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲುಗು ಗಾಯಕಿ ಮಂಗ್ಲಿಯ ಬಳಿ ಅಭಿಮಾನಿಗಳು ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ಸಂದರ್ಭದಲ್ಲಿ ಅವರು ಅಭಿಮಾನಿಗಳ ವಿರುದ್ಧ ಕೋಪಗೊಂಡು ಹೊಡೆಯಲು ಮುಂದಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಗ್ಲಿ ಅವರು ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಆಂಧ್ರ ಸಚಿವರ ಪುತ್ರನ ವಿವಾಹಕ್ಕೆ ತೆರಳಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಸೆಲ್ಪಿಗೆ ಮುಂದಾಗಿದ್ದಾರೆ. ಇದರಿಂದ ಕೋಪಗೊಂಡು ಅವರು ಹೊಡೆಯಲು ಮುಂದಾದರು. ನಂತರ ಕೆಲ ಯುವಕರು ಅವರನ್ನು ಕಾರಿನಲ್ಲಿ ಕಳುಹಿಸಿಕೊಟ್ಟರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. 

ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ಆವೃತ್ತಿಯ 'ಕಣ್ಣೇ ಅಧಿರಿಂದಿ' ಹಾಡನ್ನು ಮಂಗ್ಲಿ ಹಾಡಿದ್ದರು. ಈ ಹಾಡು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಇದೀಗ ತೆಲುಗು ಸೇರಿದಂತೆ ಕನ್ನಡ ಸಿನಿಮಾಗಳಲ್ಲೂ ಅವರು ಹಾಡುತ್ತಿದ್ದಾರೆ.

ಸದ್ಯ ಅವರು ಪ್ರೇಮ್‌ ನಿರ್ದೇಶನದ ’ಏಕ್ ಲವ್‌ಯಾ’ ಸಿನಿಮಾದಲ್ಲೂ ಹಾಡಿದ್ದಾರೆ. ಮುಂದೆ ಹಲವು ಸಿನಿಮಾಗಳಲ್ಲೂ ಅವರು ಹಾಡಲಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು