ಮಂಗಳವಾರ, ಜೂನ್ 28, 2022
28 °C

ಮೊದಲ ಬಾರಿಗೆ ಮುದ್ದು ಮಗನ ಫೋಟೊ ಹಂಚಿಕೊಂಡ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಬಹುಭಾಷಾ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರು ಬುಧವಾರ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ಗೊತ್ತೇ ಇದೆ. ಹೀಗಾಗಿ ಶ್ರೇಯಾ ಅವರು ತಮ್ಮ ಪುತ್ರನ ಫೋಟೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಪತಿ ಶಿಲಾದಿತ್ಯ ಎಂ ಕೂಡ ಇದ್ದಾರೆ. ದಂಪತಿ ತಮ್ಮ ಮಗುವನ್ನು ಹಿಡಿದುಕೊಂಡಿರುವ ಫೋಟೊವನ್ನು ಶ್ರೇಯಾ ಮೊದಲ ಬಾರಿಗೆ ಹಂಚಿಕೊಂಡಿದ್ದರೂ ಕೂಡ ಮಗನ ಮುಖವನ್ನು ಬಹಿರಂಗಪಡಿಸಿಲ್ಲ.

ಇದರೊಂದಿಗೆ ತಮ್ಮ ಪುತ್ರನಿಗೆ ಇಟ್ಟಿರುವ ಹೆಸರಿನ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮಗನಿಗೆ ದೇವ್ಯಾನ್ ಮುಖೋಪಾಧ್ಯಾಯ ಎಂದು ನಾಮಕರಣ ಮಾಡಿದ್ದಾರೆ.

Moonastro ಸೈಟಿನ ಪ್ರಕಾರ, ದೇವ್ಯಾನ್ ಎಂದರೆ 'ದೇವರಿಗೆ ಸೇವೆ ಮಾಡುವುದು' ಅಥವಾ 'ದೇವರ ರಥ' ಎಂದರ್ಥ.

ಈ ಕುರಿತು ಟ್ವೀಟ್ ಕೂಡ ಮಾಡಿರುವ ಶ್ರೇಯಾ, ''ದೇವ್ಯಾನ್ ಮುಖೋಪಾಧ್ಯಾಯ'ನನ್ನು ಪರಿಚಯಿಸುತ್ತಾ- ಮೇ 22 ರಂದು ಆತ ಜನಿಸಿದ ಮತ್ತು ನಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ. ಅವನು ಹುಟ್ಟಿದ ಮೊದಲ ನೋಟದಲ್ಲಿಯೇ ನಮ್ಮ ಹೃದಯಗಳನ್ನು ಒಂದು ರೀತಿಯ ಪ್ರೀತಿಯಿಂದ ತುಂಬಿದ. ಮಗುವಿನ ಈ ಆಗಮನದ ಖುಷಿಯನ್ನು ಕೇವಲ ತಾಯಿ, ತಂದೆ ಮಾತ್ರ ಅನುಭವಿಸಬಹುದು. ನಿಯಂತ್ರಿಸಲಾಗದ ಆಗಾಧ ಶುದ್ಧ ಪ್ರೀತಿ' ಎಂದು ಪತಿ ಶಿಲಾದಿತ್ಯ ಅವರನ್ನು ಟ್ಯಾಗ್ ಮಾಡಿದ್ದಾರೆ.

ಶ್ರೇಯಾ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್‌ಗಳ ಸುರಿಮಳೆಗೈದಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ಶಿಲಾದಿತ್ಯ ಮುಖೋಪಾಧ್ಯಾಯ ಅವರೊಂದಿಗೆ 2015ರಲ್ಲಿ ಸಪ್ತಪದಿ ತುಳಿದಿದ್ದರು. ಶ್ರೇಯಾ ಅವರು ಕನ್ನಡ, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲೂ ಹಾಡಿಗೆ ದನಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು