ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Singham Again | ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ ಪಡುಕೋಣೆ

Published 15 ಅಕ್ಟೋಬರ್ 2023, 9:42 IST
Last Updated 15 ಅಕ್ಟೋಬರ್ 2023, 9:42 IST
ಅಕ್ಷರ ಗಾತ್ರ

ಮುಂಬೈ: ಪಠಾಣ್‌, ಜವಾನ್‌ ಯಶಸ್ವಿನಲ್ಲಿ ತೇಲಾಡುತ್ತಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್‌‘ ಚಿತ್ರದಲ್ಲಿ ಲೇಡಿ ಸಿಂಗಂ ಆಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಅಜಯ್‌ ದೇವಗನ್‌ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಕರೀನಾ ಕಪೂರ್, ರಣಬೀರ್‌ ಸಿಂಗ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೋಣೆ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿರುವ ರೋಹಿತ್‌ ಶೆಟ್ಟಿ, ‘ಮಹಿಳೆ ಸೀತೆ ಮತ್ತು ದುರ್ಗಾ ಎರಡು ಅವತಾರದಲ್ಲಿ ಕಾಣಿಸಿಕೊಳ್ಳಬಲ್ಲಳು. ಲೇಡಿ ಸಿಂಗಂ ಶಕ್ತಿ ಶೆಟ್ಟಿ.... ಈಕೆ ಪೊಲೀಸ್‌ ಪ್ರಪಂಚದ ಅತ್ಯಂತ ಕ್ರೂರ ಅಧಿಕಾರಿ’ ಎಂದು ಬರೆದುಕೊಂಡಿದ್ದಾರೆ.

ಪೊಲೀಸ್‌ ಕೇಂದ್ರಿತ ಕಥೆಗಳನ್ನು ಹೆಚ್ಚಾಗಿ ನಿರ್ದೇಶಿಸುವ ರೋಹಿತ್ ಶೆಟ್ಟಿ ಈಗಾಗಲೇ ಎರಡು ಪೊಲೀಸ್‌ ಕಥೆಯಾಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಸಿಂಬಾ’ ಚಿತ್ರದಲ್ಲಿ ರಣಬೀರ್ ಸಿಂಗ್‌ ಕಾಣಿಸಿಕೊಂಡರೆ, ‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್‌ ಕುಮಾರ್ ನಟಿಸಿದ್ದರು.

ರೋಹಿತ್ ಶೆಟ್ಟಿ ನಿರ್ದೇಶನದ ‘ಚೆನ್ನೈ ಎಕ್ಸ್‌ಪ್ರೆಸ್‌‘ ಚಿತ್ರದಲ್ಲಿ ನಟಿಸಿದ್ದು, ಇದೀಗ ಮತ್ತೆ ರೋಹಿತ್‌ ಬಳಗವನ್ನು ದೀಪಿಕಾ ಸೇರಿಕೊಂಡಿದ್ದಾರೆ.

ಸದ್ಯ ಹೃತಿಕ್‌ ರೋಷನ್‌ ನಟನೆಯ ‘ಫೈಟರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT