ಶುಕ್ರವಾರ, ನವೆಂಬರ್ 15, 2019
22 °C

‌ಇಂಡಿಗೊ ಏರ್‌ಲೈನ್ಸ್‌ ವಿರುದ್ಧ ಸೋನಾಕ್ಷಿ ಗರಂ: ವಿಡಿಯೊ ವೈರಲ್‌

Published:
Updated:

ಮುಂಬೈ: ತಮ್ಮ ಸೂಟ್‌ಕೇಸ್‌ ಹ್ಯಾಂಡಲ್‌ ಮುರಿದಿರುವುದಕ್ಕೆ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಇಂಡಿಗೊ ಏರ್‌ಲೈನ್ಸ್‌ ವಿರುದ್ಧ ಗರಂ ಆಗಿದ್ದಾರೆ. 

ಈ ಕುರಿತು ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

‘ಸೂಟ್‌ಕೇಸ್‌ನ ಎರಡು ಹ್ಯಾಂಡಲ್‌ಗಳು ಸಂಪೂರ್ಣವಾಗಿ ಮುರಿದುಹೋಗಿವೆ. ಜತೆಗೆ, ಒಂದು ಚಕ್ರವು ಹೊರ ಬಂದಿದೆ. ಇಂಡಿಯೊ ಸಿಬ್ಬಂದಿಗೆ ಧನ್ಯವಾದಗಳು. ಇದರಿಂದ ಸಾರ್ವಜನಿಕರಿಗೆ ತೊಂದರೆ ತಪ್ಪಿದಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ. 

ಘಟನೆ ಸಂಬಂಧ ರೀ ಟ್ವೀಟ್‌ ಮಾಡಿರುವ ಇಂಡಿಗೊ, ‘ಸೋನಾಕ್ಷಿ ಅವರೇ ನಿಮ್ಮ ಬ್ಯಾಗ್‌ ಹಾನಿಯಾಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ. ನಿಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತೇವೆ‘ ಎಂದಿದ್ದಾರೆ. 

ಪ್ರತಿಕ್ರಿಯಿಸಿ (+)