ಸೈಫ್ ಅಲಿ ಖಾನ್‌ನ ‘ಲಾಲ್ ಕಪ್ತಾನ್’ ಸಿನಿಮಾವು ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಕಾರಣಗಳಿಂದ ಸುದ್ದಿಯಲ್ಲಿದೆ. ಈಗ ಈ ಸಿನಿಮಾದ ಪೋಸ್ಟರ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನವದೀಪ್ ಸಿಂಗ್ ಅವರ ‘ಲಾಲ್ ಕಪ್ತಾನ್’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ ನಟಿಸುತ್ತಿದ್ದಾರೆ. ‘ಕಲಂಕ್’, ‘ಖಾಂದನಿ ಶಫಾಖಾನ’, ‘ಮಿಷನ್ ಮಂಗಲ್’ ಸಿನಿಮಾದ ನಂತರ ಈ ವರ್ಷ ಸೋನಾಕ್ಷಿ ನಟಿಸಿರುವ ನಾಲ್ಕನೇ ಚಿತ್ರ ‘ಲಾಲ್ ಕಪ್ತಾನ್’. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಕೆಂಪು ಅದ್ಧೂರಿ ಲೆಹೆಂಗಾ ತೊಟ್ಟಿರುವ ಅವರು ಮುಖವನ್ನು ಬರಿ ಕಣ್ಣು ಕಾಣುವಂತೆ ಪರದೆಯಿಂದ ಮುಚ್ಚಿಕೊಂಡಿದ್ದಾರೆ. ಇದು ಅವರ ಪಾತ್ರದ ಬಗ್ಗೆ ಕುತೂಹಲವನ್ನು ಹೆಚ್ಚು ಮಾಡಿದೆ.

ಇದನ್ನೂ ಓದಿ:ತಂದೆ ಆಗಲೇ ಬಿಜೆಪಿಯನ್ನು ತೊರೆಯಬೇಕಾಗಿತ್ತು -ಸೋನಾಕ್ಷಿ ಸಿನ್ಹಾ

‘ಮಿಷನ್ ಮಂಗಲ್’ ಸಿನಿಮಾದಲ್ಲಿ ವಿಜ್ಞಾನಿಯಾಗಿ ನಟಿಸಿದ್ದ ಹಾಗೂ‘ದಬಾಂಗ್ 3’ನಲ್ಲಿ ಗೃಹಿಣಿಯಾಗಿ ಅಭಿನಯಿಸುತ್ತಿರುವ ಅವರು ‘ಲಾಲ್ ಕಪ್ತಾನ್’ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಿಸಿದ್ದಾರೆ.‘ಇದು ಅತಿಥಿ ಪಾತ್ರವಾದರೂ, ಈ ಪಾತ್ರಕ್ಕೆ ಚಿತ್ರದಲ್ಲಿ ತುಂಬಾ ಪ್ರಾಮುಖ್ಯತೆ ಇದೆ. ಇದಕ್ಕೆ ಜನಪ್ರಿಯ ನಟಿಯೇ ಬೇಕಾಗಿತ್ತು. ಸೋನಾಕ್ಷಿ ಈ ಪಾತ್ರಕ್ಕೆ ಸರಿಹೊಂದುತ್ತಾರೆ. ಅವರ ಪಾತ್ರದ ಬಗ್ಗೆ ಕುತೂಹಲ ಉಳಿಸಿಕೊಂಡಿದ್ದೇವೆ. ಈ ಸಿನಿಮಾದ ಮುಖ್ಯ ಗ್ಲಾಮರಸ್ ಭಾಗ ಅವರದೇ’ ಎಂದು ನವದೀಪ್ ಸಿಂಗ್ ಹೇಳಿದ್ದಾರೆ.

2013ರಲ್ಲಿ ‘ಬುಲೆಟ್ ರಾಜ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಆರು ವರ್ಷಗಳ ನಂತರ ಈ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.