ಸೋಮವಾರ, ಮೇ 23, 2022
27 °C

ನಟಿ ಸೋನಮ್ ಕಪೂರ್ ದೆಹಲಿ ಮನೆ ದರೋಡೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಟಿ ಸೋನಮ್ ಕಪೂರ್ ಹಾಗೂ ಉದ್ಯಮಿ ಆನಂದ ಅಹುಜಾ ದಂಪತಿಯ ದೆಹಲಿ ನಿವಾಸದಲ್ಲಿ ಇತ್ತೀಚೆಗೆ ದರೋಡೆ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ.

ದೆಹಲಿ ಪೊಲೀಸ್‌ಗೆ ಸೋನಮ್ ಕಪೂರ್ ನೀಡಿರುವ ದೂರಿನ ಆಧಾರದ ಮೇಲೆ ಅಮೃತ್ ಶೇರ್ಗಿಲ್ ಮಾರ್ಗದ ಮನೆಯಲ್ಲಿ ಸುಮಾರು ₹1.41 ಕೋಟಿ ಮೌಲ್ಯದ ನಗದು ಹಾಗೂ ಆಭರಣ ಕಳವಾಗಿದೆ ಎಂಬುದಾಗಿ ಕೆಲ ವಾಹಿನಿಗಳು ವರದಿ ಮಾಡಿವೆ.

ಓದಿ...  ಹಿಂದಿ ಸಿನಿಮಾದಲ್ಲಿ ನಟಿಸುವ ಅಗತ್ಯ ನನಗಿಲ್ಲ: ಮಹೇಶ್ ಬಾಬು ಹೀಗೆ ಹೇಳಿದ್ದು ಯಾಕೆ?

ದೂರಿನ ಅನ್ವಯ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು ಅಹುಜಾ ಮನೆಯಲ್ಲಿನ 24 ಕಾರ್ಮಿಕರನ್ನು ವಿಚಾರಣೆ ನಡೆಸಿದ್ದಾರೆ. ಮನೆಗೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಕೂಡ ಭೇಟಿ ನೀಡಿದೆ ಎಂದು ತಿಳಿದು ಬಂದಿದೆ.

ಸೋನಮ್ ಕಪೂರ್ ಮನೆಯಲ್ಲಿ ಅವರ ಅತ್ತೆ, ಮಾವ, ಗಂಡ ಆನಂದ ಅವರ ಅಜ್ಜಿ ವಾಸಿಸುತ್ತಿದ್ದಾರೆ. ಮೂಲಗಳ ಪ್ರಕಾರ ಈ ದೊಡ್ಡಮಟ್ಟದ ಕಳ್ಳತನ ಫೆಬ್ರವರಿಯಲ್ಲಿಯೇ ನಡೆದಿದೆ. ಫೆ.27 ರಂದು ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಮುಂಬೈನಲ್ಲಿರುವ ಸೋನಮ್ ಹಾಗೂ ಆನಂದ ಅವರು ತಮ್ಮ ಮೊದಲ ಮಗು ಆಗಮನದ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು