ಬುಧವಾರ, ಜನವರಿ 22, 2020
28 °C

ಲಂಡನ್‌ನಲ್ಲಿ ಉಬರ್‌ ಟ್ಯಾಕ್ಸಿ ಚಾಲಕನಿಂದ ನನಗೆ ಕೆಟ್ಟ ಅನುಭವ: ಸೋನಂ ಕಪೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಲಂಡನ್‌ನ ಉಬರ್‌ ಟ್ಯಾಕ್ಸಿ ಚಾಲಕನಿಂದ ನನಗೆ ಕೆಟ್ಟ ಅನುಭವವಾಯಿತು ಎಂದು  ಬಾಲಿವುಡ್‌ ನಟಿ ಸೋನಂ ಕಪೂರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಲಂಡನ್‌ನಲ್ಲಿ ಉಬರ್ ಟ್ಯಾಕ್ಸಿ ಸೇವೆ ಬಳಕೆ ಮಾಡಿದಾಗ ಭಯಾನಕ ಅನುಭವವಾಯಿತು ಎಂದು ಅವರು ಬರೆದುಕೊಂಡಿದ್ದಾರೆ. ಚಾಲಕನ ವರ್ತನೆ ಬೇಸರ ತರಿಸಿತು, ಜೊತೆಗೆ ಜೋರಾಗಿ ಕಿರುಚಾಡುತ್ತಿದ್ದ ಎಂದು ಸೋನಂ ಕಪೂರ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಲಂಡನ್‌ನಲ್ಲಿ ಉಬರ್‌ ಟ್ಯಾಕ್ಸಿ ಸೇವೆ ಬಳಸಿದಾಗ ನನಗೆ ಕೆಟ್ಟ ಅನುಭವವಾಯಿತು. ದಯವಿಟ್ಟು, ಜಾಗೃತರಾಗಿರಿ, ಸ್ಥಳೀಯ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್‌ ಸೇವೆ ಬಳಸುವುದೇ ಉತ್ತಮ. ನಾನಂತೂ ಸಿಕ್ಕಾಪಟ್ಟೆ ಭಯಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಉಬರ್‌ ಸಂಸ್ಥೆ, ನಡೆದ ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಸೋನಂ ಕಪೂರ್‌ ಅವರಲ್ಲಿ ಮನವಿ ಮಾಡಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು