ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

Published 8 ಮೇ 2024, 12:59 IST
Last Updated 8 ಮೇ 2024, 12:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್‌ ಗಾಲಾ ಫ್ಯಾಷನ್‌ ಶೋ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಸಖತ್‌ ಮಿಂಚಿದ್ದಾರೆ. ಸವ್ಯಸಾಚಿ ಮುಖರ್ಜಿ ಡಿಸೈನ್‌ ಮಾಡಿದ ಹೂವಿನಿಂದ ತುಂಬಿದ ಸೀರೆಯುಟ್ಟು ಜಗತ್ತಿನ ಗಮನ ಸೆಳೆದಿದ್ದಾರೆ. 

ಎರಡನೇ ಬಾರಿಗೆ ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ನಲ್ಲಿ ಆಲಿಯಾ ಹೆಜ್ಜೆ ಹಾಕಿದ್ದಾರೆ. ದಿ ಗಾರ್ಡನ್ ಆಫ್ ಟೈಮ್ ಥೀಮ್‌ನಲ್ಲಿ ಆಲಿಯಾ ಅವರ ಸೀರೆಯನ್ನು ತಯಾರಿಸಲಾಗಿದೆ. 

23 ಅಡಿ ಉದ್ದದ ಸೀರೆ ಸಂಪೂರ್ಣವಾಗಿ ಹೂವುಗಳು, ಗಾಜಿನ ಮಣಿಗಳು ಮತ್ತು ಅಮೂಲ್ಯ ರತ್ನದ ಕಲ್ಲುಗಳನ್ನು ಬಳಸಿ ಸೂಕ್ಷ್ಮವಾಗಿ ಕೈಯಿಂದ ಕಸೂತಿ ಮಾಡಲಾಗಿದೆ.

ತಮ್ಮ ಸೀರೆಯ ವಿಶೇಷತೆಯ ಕುರಿತು ಮಾತನಾಡಿದ ಆಲಿಯಾ, ‘ಇದು ಸಂಪೂರ್ಣ ಕೈಯಿಂದ ಕಸೂತಿ ಮಾಡಲಾದ ಸೀರೆಯಾಗಿದೆ.  ಈ ಉಡುಪನ್ನು 1,905 ಗಂಟೆಗಳ ಕಾಲ 163 ಕುಶಲಕರ್ಮಿಗಳು, ಕಸೂತಿ ಕೆಲಸಗಾರರು ಪ್ರೀತಿ ಮತ್ತು ಸಮಯದಿಂದ ತಯಾರಿಸಿದ್ದಾರೆ’ ಎಂದಿದ್ದಾರೆ.

ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಫೋಟೊಗಳನ್ನು ಆಲಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

ಮೆಟ್ ಗಾಲಾ ಎಂಬುದು ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್‌. ಇದಕ್ಕೆ ನಿಧಿ ಸಂಗ್ರಹಿಸಲು ಫ್ಯಾಷನ್‌ ಕಾರ್ಯಕ್ರಮವನ್ನು ಪ್ರತಿ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT