ಸೋಮವಾರ, ಆಗಸ್ಟ್ 8, 2022
23 °C

ಶಾರುಖ್‌ ಬಾಲಿವುಡ್‌ ಪ್ರವೇಶಿಸಿ 30 ವರ್ಷ: ‘ಪಠಾಣ್‌‘ ಹೊಸ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಬಾಲಿವುಡ್‌ಗೆ ಪ್ರವೇಶ ಮಾಡಿ 30 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಪಠಾಣ್‌ ಸಿನಿಮಾ ತಂಡ ನೂತನ ಪೋಸ್ಟ್‌ರ್ ಬಿಡುಗಡೆ ಮಾಡಿದೆ.

ಚಿತ್ರತಂಡ ಶಾರುಖ್‌ ಖಾನ್‌ಗೆ ಶುಭ ಕೋರಿದ್ದು, ಮುಂದಿನ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ ಎಂದು ಹಾರೈಸಿ ಟ್ವೀಟ್ ಮಾಡಿದೆ. ಶಾರುಖ್‌ ಅಭಿನಯಿಸಿದ್ದ ‘ದೀವಾನ‘ ಸಿನಿಮಾ 1992, ಜುಲೈ 25ರಂದು ಬಿಡುಗಡೆಯಾಗಿತ್ತು. ಇದು ಅವರ ಮೊದಲ ಸಿನಿಮಾ. ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿರುವ ಅವರು ‘ಪಠಾಣ್‌‘ ನಂತರ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಪೋಸ್ಟರ್‌ ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಕೂಡ ಪುಲ್‌ ಖುಷಿಯಾಗಿದ್ದಾರೆ. 

ಯಶ್‌ ರಾಜ್‌ ಬ್ಯಾನರ್‌ ಅಡಿ ಪಠಾಣ್‌ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಶಾರುಖ್‌ ಗೂಢಚಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಾನ್‌ ಅಬ್ರಹಾಂ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆ್ಯಕ್ಷನ್‌–ಥ್ರಿಲ್ಲರ್‌ ಕಥೆ ಒಳಗೊಂಡಿರುವ 'ಪಠಾಣ್‌' ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ 2023ರ ಜನವರಿ 25ರಂದು ತೆರೆಗೆ ಬರಲಿದೆ. 2018ರಲ್ಲಿ ತೆರೆಕಂಡಿದ್ದ 'ಝೀರೊ' ಸಿನಿಮಾದ ನಂತರ ಶಾರುಖ್‌ ಅಭಿನಯಿಸಿರುವ ಸಿನಿಮಾ ಪಠಾಣ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು