ಬೆಂಗಳೂರು: ಲಾಕ್ಡೌನ್ ಘೋಷಣೆಯಾದ ಬಳಿಕ ದೂರದರ್ಶನದದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆಯುವುದರ ಜತೆಗೆ ದೂರದರ್ಶನ ಸಹ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನವೊಂದು ಹರಿದಾಡುತ್ತಿದೆ. ಅದೇ #ರಾಜಮೌಳಿರಾಮಾಯಣ.

ಹೌದು, ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರು ರಾಮಾಯಣ ಕುರಿತು ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂದು ಟ್ವಿಟ್ಟರ್ನಲ್ಲಿ ಟ್ರೆಂಡ್ ಸೃಷ್ಟಿಸಿ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ #Rajmoulimakeramayan ಎಂಬ ಹ್ಯಾಶ್ಟ್ಯಾಗ್ ನಿರ್ಮಾಣ ಮಾಡಲಾಗಿದೆ.

ರಾಜಮೌಳಿ ಫ್ಯಾನ್ಸ್ ಸೇರಿದಂತೆ ರಾಮಾಯಣ ಧಾರಾವಾಹಿಯ ಅಭಿಮಾನಿಗಳು ಈ ಅಭಿಯಾನಕ್ಕೆ ಜೈ ಎಂದಿದ್ದಾರೆ. ಟ್ವಿಟ್ಟರ್ನಲ್ಲಿ ರಾಜಮೌಳಿ ರಾಮಾಯಣ ಸಿನಿಮಾ ಮಾಡುವಂತೆಹಲವರು ಮನವಿ ಮಾಡಿದ್ದಾರೆ.

ಇನ್ನು ಕೆಲವರಂತೂ ಇಂತಹವರೇ ರಾಮನಾಗಬೇಕು, ಇವರೇ ಸೀತೆಯಾಗಬೇಕು ಎಂದು ಕೂಡ ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.