ನವದೆಹಲಿ: ಬಾಲಿವುಡ್‌ನ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟನೆಯ ಹಾರರ್ ಕಾಮಿಡಿ ಸಿನಿಮಾ ‘ಸ್ತ್ರೀ 2’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ₹586 ಕೋಟಿ ಗಳಿಸಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮರ್ ಕೌಶಿಕ್ ನಿರ್ದೇಶನ, ದಿನೇಶ್ ವಿಜಾನ್ ನಿರ್ಮಾಣದಲ್ಲಿ ಮ್ಯಾಡ್‌ಡಾಕ್ ಫಿಲ್ಮ್ಣ, ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಆ.15ರಂದು ಸಿನಿಮಾ ಬಿಡುಗಡೆಗೊಂಡಿತ್ತು.
ಸಿನಿಮಾ ಬಿಡಗಡೆಯಾದ 5ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಅಭೀಷೇಕ್ ಬ್ಯಾನರ್ಜಿ, ಪಂಕಜ್ ತ್ರಿಪಾಠಿ ಮತ್ತು ಅಪರಶಕ್ತಿ ಖುರಾನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ತ್ರೀ –2 ಚಿತ್ರವು, 2023ರಲ್ಲಿ ಬಿಡುಗಡೆಯಾದ ಶಾರುಕ್ ಖಾನ್ ನಟನೆಯ ಜವಾನ್ ಚಿತ್ರದ ಗಳಿಕೆ (₹582)ಯನ್ನೂ ಹಿಂದಿಕ್ಕಿದೆ.