13 ವರ್ಷದ ಬಳಿಕ ಟ್ವಿಟರ್ ಡಿಪಿ ಬದಲಿಸಿ ಪುನೀತ್ ಚಿತ್ರ ಹಾಕಿದ ಸುದೀಪ್

ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅಗಲಿಕೆಯು ಇಡೀ ಭಾರತೀಯ ಚಿತ್ರರಂಗಕ್ಕೆ ಭರಿಸಲಾಗದ ನೋವು ನೀಡಿದೆ. ಅದರಲ್ಲೂ ಪುನೀತ್ ಅವರನ್ನು ಹತ್ತಿರದಿಂದ ನೋಡಿದ್ದ ಕನ್ನಡದ ನಟ, ನಟಿಯರಿಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಪುನೀತ್ ನಿಧನದ ಬಗ್ಗೆ ಅತೀವ ನೋವನ್ನು ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು, 13 ವರ್ಷಗಳ ಬಳಿಕ ತಮ್ಮ ಟ್ವಿಟರ್ ಡಿಪಿ ಬದಲಿಸಿ ಪುನೀತ್ ರಾಜ್‌ಕುಮಾರ್ ಚಿತ್ರವನ್ನು ಹಾಕುವ ಮೂಲಕ ಅತ್ಯುನ್ನತ ಗೌರವ ಸಲ್ಲಿಸಿದ್ದಾರೆ.
ಅಪ್ಪು ಕುರಿತು ಟ್ವಿಟರ್‌ನಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿರುವ ಅವರು, 'ಇದು ಭರಿಸಲಾಗದ ಶೂನ್ಯ' ಎಂದು ತಿಳಿಸಿದ್ದಾರೆ.
An irreplaceable Void. pic.twitter.com/fjqhvyahZZ
— Kichcha Sudeepa (@KicchaSudeep) October 30, 2021
'A Born Star' ಎಂಬ ಶೀರ್ಷಿಕೆ ನೀಡಿ ಪುನೀತ್ ಅವರ ಮೊದಲ ಭೇಟಿಯಿಂದ ಅವರ ಜೊತೆ ಕಳೆದ ಕ್ಷಣಗಳನ್ನು ಸುದೀಪ್ ಮೆಲುಕು ಹಾಕಿದ್ದಾರೆ
'ಇದು ಬಾಲ್ಯದಿಂದ ಶುರುವಾದ ಪಯಣವಾಗಿದೆ. ಅಪ್ಪು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯಾದಾಗ ಅವರಾಗಲೇ ಸ್ಟಾರ್ ಆಗಿದ್ದರು. ಅವರ ನಟನೆಯ ಭಾಗ್ಯವಂತರು ಚಿತ್ರವು ಹಿಟ್ ಆಗಿತ್ತು. ಪುನೀತ್ ಅವರು ಚಿತ್ರಮಂದಿರ ಭೇಟಿ ಬಳಿಕ ಊಟಕ್ಕೆಂದು ನಮ್ಮ ಮನೆಗೆ ಬಂದಿದ್ದರು. ನಾನು ಮೊದಲ ಬಾರಿ ಅವರನ್ನು ಭೇಟಿಯಾಗಿದ್ದೆ. ನಾವು ಸಮಾನ ವಯಸ್ಸಿನವರಾಗಿದ್ದರಿಂದ ಬೇಗ ಹತ್ತಿರವಾದೆವು. ನಮ್ಮ ಮನೆಯ ಊಟಕ್ಕಿಂತ ನನ್ನ ಗೊಂಬೆಗಳ ಮೇಲೆ ಅಪ್ಪು ಹೆಚ್ಚು ಆಕರ್ಷಿತರಾಗಿದ್ದರು ಎಂದು ಚಿಕ್ಕಂದಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ.. ಬಿಬಿಸಿ ನ್ಯೂಸ್ನಲ್ಲಿ ಪುನೀತ್ ನಿಧನದ ಸುದ್ದಿ ಪ್ರಸಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.