ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಕ್ಸ್’ ಚಿತ್ರೀಕರಣ ಮುಕ್ತಾಯ

Published 16 ಮೇ 2024, 16:09 IST
Last Updated 16 ಮೇ 2024, 16:09 IST
ಅಕ್ಷರ ಗಾತ್ರ

ಕಿಚ್ಚ ಸುದೀಪ್​ ಅಭಿನಯದ ‘ಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸ್ವತಃ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 

‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸುದೀಪ್​ ಅವರ ಬೇರೆ ಸಿನಿಮಾ ಬಿಡುಗಡೆಗೊಂಡಿಲ್ಲ. ‘ಮ್ಯಾಕ್ಸ್‌’ ಚಿತ್ರಕ್ಕಾಗಿ ಸಮಯ ಮೀಸಲಿಟ್ಟಿದ್ದ ಅವರು ಕಿರುತೆರೆಯ ರಿಯಾಲಿಟಿ ಶೋನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.

‘ಮಹಾಬಲಿಪುರಂನಲ್ಲಿ ‘ಮ್ಯಾಕ್ಸ್‌’ ಚಿತ್ರೀಕರಣ ಪೂರ್ಣಗೊಂಡಿದೆ. 10 ತಿಂಗಳ ದೀರ್ಘವಾದ ಪಯಣ. ನಾನು ಇಲ್ಲಿನ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ. ಅತ್ಯುತ್ತಮ ತಂಡ ಮತ್ತು ಕಲಾವಿದರ ಜೊತೆ ಕೆಲಸ ಮಾಡಿದ ತೃಪ್ತಿಯಿದೆ. ಚಿತ್ರೀಕರಣ ಸುಗಮವಾಗಿ ಸಾಗಲು ನೆರವಾದ ನಿರ್ಮಾಪಕರಿಗೆ, ನಿರ್ದೇಶಕ ವಿಜಯ್ ಹಾಗೂ ಅವರ ತಂಡಕ್ಕೆ ವಿಶೇಷ ಧನ್ಯವಾದಗಳು’ ಎಂದು ಸುದೀಪ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದು, ಚಿತ್ರೀಕರಣ ಸ್ಥಳದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಆ್ಯಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರವನ್ನು ವಿಜಯ್ ಕಾರ್ತಿಕೇಯನ್‌ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕೆಆರ್​ಜಿ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ಮಹಾಬಲಿಪುರಂನಲ್ಲಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಈ ವರ್ಷವೇ ಚಿತ್ರ ತೆರೆಗೆ ಬರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT