ಸೋಮವಾರ, ಆಗಸ್ಟ್ 8, 2022
23 °C

ರಿಲೀಸ್‌ಗೆ ಮುನ್ನವೇ ‘ಶುಗರ್‌ಲೆಸ್‌’ಗೆ ಸಕ್ಕರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೃಥ್ವಿ ಅಂಬಾರ್‌ ಹಾಗೂ ಪ್ರಿಯಾಂಕ ತಿಮ್ಮೇಶ್‌ ನಟನೆಯ, ಕೆ.ಎಂ.ಶಶಿಧರ್‌ ನಿರ್ದೇಶನದ ‘ಶುಗರ್‌ಲೆಸ್‌’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನವೇ, ಚಿತ್ರದ ಹಿಂದಿ ರಿಮೇಕ್‌ ಹಕ್ಕುಗಳನ್ನು ಬಾಲಿವುಡ್‌ನ ಹೆಸರಾಂತ ಸಂಸ್ಥೆಯಾದ ಬ್ಲ್ಯಾಕ್ ಪ್ಯಾಂತರ್ ಮೂವೀಸ್ ಲಿಮಿಟೆಡ್ ಖರೀದಿಸಿದೆ. 

ಈ ಕುರಿತು ಮಾಹಿತಿ ನೀಡಿರುವ ಶಶಿಧರ್‌, ‘ಈಗಾಗಲೇ ಹಿಂದಿ ಭಾಷೆಯಲ್ಲಿ ಈ ಚಿತ್ರವನ್ನು ನಾನೇ ನಿರ್ದೇಶನ ಮಾಡಲು ಬ್ಲ್ಯಾಕ್ ಪ್ಯಾಂತರ್ ಮೂವೀಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಚಿತ್ರದ ಚಿತ್ರೀಕರಣವನ್ನು ಆಗಸ್ಟ್‌ನಿಂದಲೇ ಪ್ರಾರಂಭಿಸಲಿದ್ದೇವೆ. ಚಿತ್ರದ ನಾಯಕನ ಪಾತ್ರಕ್ಕೆ ಒಬ್ಬ ಬಿಗ್‌ಸ್ಟಾರ್ ಜೊತೆಗೆ ಈಗಾಗಲೇ ಒಪ್ಪಂದ ಕೂಡಾ ಆಗಿದೆ. ಶೀಘ್ರದಲ್ಲೇ ಹೆಸರು ಬಹಿರಂಗಗೊಳಿಸುತ್ತೇವೆ’ ಎಂದರು.

ಕನ್ನಡದಲ್ಲಿ ಜುಲೈ 8ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಕ್ಕರೆ ಕಾಯಿಲೆ ಇರುವ ಯುವಕನೊಬ್ಬನ ಮನಸಿನ ತಳಮಳಗಳು, ಸಂಕಟವನ್ನು ತೆರೆದಿಡುವುದರ ಜೊತೆಗೆ ಸಕ್ಕರೆ ಕಾಯಿಲೆ ಇದ್ದರೂ ಹೇಗೆ ಸುಖಮಯ ಜೀವನ ನಡೆಸಬಹುದು ಎನ್ನುವುದು ಚಿತ್ರದ ಕಥಾಹಂದರ. 

ಚಿತ್ರದ ಕುರಿತು ಮಾತನಾಡಿದ ಪೃಥ್ವಿ ಅಂಬಾರ್‌, ‘ಚಿತ್ರಕ್ಕೆ ಗುರು ಕಶ್ಯಪ್ ಅವರು ಅದ್ಭುತ ಸಂಭಾಷಣೆ ಬರೆದಿದ್ದಾರೆ. ರೊಮ್ಯಾನ್ಸ್, ಹಾಸ್ಯ, ಭಾವನೆಗಳು ತುಂಬಿರುವ ಚಿತ್ರವಿದು. ಹೆಸರು ಮಾತ್ರ ‘ಶುಗರ್‌ಲೆಸ್’. ಆದರೆ ಚಿತ್ರದ ತುಂಬಾ ಸಿಹಿಯೇ ತುಂಬಿದೆ’ ಎಂದರು.

ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ. ದಿಶಾ ಎಂಟರ್‌ಟೈನ್ಮೆಂಟ್ ಹಾಗೂ ಜಾಜಿ ಪ್ರೊಡಕ್ಷನ್ಸ್ ಸಹಕಾರದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲವಿತ್ ಛಾಯಾಗ್ರಾಹಣ ಹಾಗೂ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು