ಹೃದಯಾಘಾತದಿಂದ ಮೊನ್ನೆ ನಿಧನರಾದ ಸರೋಜ್ ಖಾನ್ ಅನೇಕ ಕಲಾವಿದರನ್ನು ಕುಣಿಸಿದ ಬಾಲಿವುಡ್‌ನ ಸ್ಟಾರ್ ಕೊರಿಯೊಗ್ರಾಫರ್. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೀವನದ ಕೊನೆಗಾಲದಲ್ಲಿ ಬಾಲಿವುಡ್‌ನಿಂದ ದೂರವೇ ಉಳಿದಿದ್ದರು. ಬಾಲಿವುಡ್ ಕೂಡ ಬಹುತೇಕ ಅವರನ್ನು ಮರೆತುಬಿಟ್ಟಿತ್ತು. ಕೊನೆಯವರೆಗೂ ಅವರೊಂದಿಗೆ ಸಂಪರ್ಕದಲ್ಲಿದ್ದದ್ದು ಕೆಲವೇ ಕೆಲವು ಆಪ್ತ ಕಲಾವಿದರು ಮಾತ್ರ.

ಬಾಲಿವುಡ್‘ಮಾಸ್ಟರ್ ಜೀ’ ಕಷ್ಟಕಾಲದಲ್ಲಿ ಯಾವೆಲ್ಲ ಕಲಾವಿದರು ಸಂಪರ್ಕದಲ್ಲಿದ್ದರು ಎಂಬ ವಿಷಯವನ್ನು ಸರೋಜ್ ಖಾನ್ ಪುತ್ರಿಸುಕೈನಾ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ವಯಸ್ಸು ಮತ್ತು ಅನಾರೋಗ್ಯದಿಂದಾಗಿ ‘ಮಾಸ್ಟರ್ ಜೀ’ ಅನೇಕ ಸಿನಿಮಾಗಳ ನೃತ್ಯ ಸಂಯೋಜನೆ ಆಫರ್ ನಿರಾಕರಿಸಿದ್ದರು. ಹಾಗಂತ ಸುಮ್ಮನೆ ಕುಳಿತಿರಲಿಲ್ಲ. ಕೊನೆಯವರೆಗೂ ಕ್ರಿಯಾಶೀಲರಾಗಿದ್ದರು. ಅಲಿಝ್ ಅಗ್ನಿಹೋತ್ರಿ, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ಸಾಯಿ ಮಾಂಜ್ರೇಕರ್ ಸೇರಿದಂತೆ ಬಾಲಿವುಡ್‌ನ ಹಲವು ಯುವ ತಾರೆಯರಿಗೆ ನೃತ್ಯ ತರಬೇತಿ ನೀಡುತ್ತಿದ್ದರು’ ಎಂದು ಆಕೆ ನೆನಪಿಸಿಕೊಂಡಿದ್ದಾರೆ.

‘ಸರೋಜ್ ಖಾನ್ ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡಮಟ್ಟದ ಬ್ರೇಕ್ ನೀಡಿದ ನಿರ್ದೇಶಕ ಸುಭಾಷ್ ಘಾಯ್, ಮಾಧುರಿ, ಜಾಕಿ ಶ್ರಾಫ್, ಗೋವಿಂದ್ ಮುಂತಾದವರು ಆಗಾಗ ಅಮ್ಮನಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ನನಗೂ ಫೋನ್ ಮಾಡಿ ‘ಮಾಸ್ಟರ್ ಜೀ’ ಹೇಗಿದ್ದಾರೆ ಎಂದು ಕಾಳಜಿ ತೋರುತ್ತಿದ್ದರು’ ಎಂದು ಸುಕೈನಾ ಹೇಳಿದ್ದಾರೆ.

‘ಅಮ್ಮನ ರಕ್ತದಲ್ಲಿಬಾಲಿವುಡ್ ಇತ್ತು. ಆದರೂ, ಅಮ್ಮನಿಗೆ ಬಾಲಿವುಡ್‌ಗಿಂತ ಕಿರುತೆರೆ ಹೆಚ್ಚು ಇಷ್ಟದ ಮಾಧ್ಯಮವಾಗಿತ್ತು. ಟಿ.ವಿ.ರಿಯಾಲಿಟಿ ಡಾನ್ಸ್ ಷೋ ತೀರ್ಪುಗಾರರಾಗಿ ಅವರು ಪಾಲ್ಗೊಳ್ಳಬೇಕಿತ್ತು’ ಎಂದು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.